Friday, April 19, 2024
Homeತಾಜಾ ಸುದ್ದಿಕೊರೊನಾ ಅಬ್ಬರಕ್ಕೆ ಬಸವಳಿದ ನೇಕಾರ ಉದ್ಯಮ- ನೆರವಿಗೆ ನಿಂತ ಪ್ರಿಯಾಂಕ ಉಪೇಂದ್ರ!..

ಕೊರೊನಾ ಅಬ್ಬರಕ್ಕೆ ಬಸವಳಿದ ನೇಕಾರ ಉದ್ಯಮ- ನೆರವಿಗೆ ನಿಂತ ಪ್ರಿಯಾಂಕ ಉಪೇಂದ್ರ!..

spot_img
- Advertisement -
- Advertisement -

ಬೆಂಗಳೂರು: ಸಾಮಾಜಿಕ ಸೇವೆಗಳಿಂದ ಗುರುತಿಸಿಕೊಂಡಿರುವ ನಟಿ ಪ್ರಿಯಾಂಕ ಉಪೇಂದ್ರ ನೇಕಾರ ಉದ್ಯಮದ ನೆರವಿಗೆ ನಿಂತಿದ್ದಾರೆ. ಕೊರೊನಾದಿಂದಾಗಿ ನೇಕಾರರ ಬದುಕು ಬೀದಿಗೆ ಬಿದ್ದಿದ್ದು, ಇವರಿಗೆ ಸಹಾಯ ಮಾಡುವಂತೆ ನಟಿ ಮನವಿ ಮಾಡಿದ್ದಾರೆ.

ಈ ಬಗ್ಗೆ ಫೇಸ್ ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕ ಉಪೇಂದ್ರ, ಕೊರೊನಾದಿಂದಾಗಿ ನೇಕಾರರು ಬೀದಿಗೆ ಬೀಳುವ ಪರಿಸ್ಥಿತಿ ಬಂದಿದೆ. ನನಗೆ ನೇಕಾರ ಸಮುದಾಯದ ಬಗ್ಗೆ ಕಾಳಜಿ ಇದೆ. ನಿಮ್ಮ ಸಹಕಾರ ಈ ಸಮುದಾಯದವರಿಗೆ ಬೇಕಾಗಿದೆ. ಹೀಗಾಗಿ ನೇಕಾರರು ನೇಯ್ದ ಬಟ್ಟೆಗಳನ್ನು ಕೊಳ್ಳುವ ಮೂಲಕ ಅವರಿಗೆ ನೆರವಾಗಿ. ಇದರಿಂದ ಅವರ ಜೀವನಕ್ಕೆ ಒಳಿತಾಗುತ್ತದೆ ಎಂದಿದ್ದಾರೆ. ಹಾಗೆಯೇ ಅನೇಕ ನಟ ನಟಿಯರಿಗೂ ಇದನ್ನು ಟ್ಯಾಕ್ ಮಾಡುವ ಮೂಲಕ ಅವರಿಗೂ ವಿನಂತಿ ಮಾಡಿದ್ದಾರೆ.

- Advertisement -
spot_img

Latest News

error: Content is protected !!