Sunday, April 28, 2024
Homeಚಿಕ್ಕಮಗಳೂರುಚಿಕ್ಕಮಗಳೂರು : ಚಾರಣಕ್ಕೆ ಬಂದ ಯುವಕ ನಾಪತ್ತೆ; ಪೊಲೀಸರ ಪ್ರಯತ್ನದಿಂದ ಮಧ್ಯರಾತ್ರಿ ಯುವಕ ಪತ್ತೆ

ಚಿಕ್ಕಮಗಳೂರು : ಚಾರಣಕ್ಕೆ ಬಂದ ಯುವಕ ನಾಪತ್ತೆ; ಪೊಲೀಸರ ಪ್ರಯತ್ನದಿಂದ ಮಧ್ಯರಾತ್ರಿ ಯುವಕ ಪತ್ತೆ

spot_img
- Advertisement -
- Advertisement -

ಚಿಕ್ಕಮಗಳೂರು ; ಚಿಕ್ಕಮಗಳೂರು ಜಿಲ್ಲೆಯ ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಲ್ಲಾಳರಾಯ ದುರ್ಗ ಹಾಗೂ ಬೆಳ್ತಂಗಡಿ ತಾಲೂಕಿನ ಭಂಡಾಜೆ ಫಾಲ್ಸ್ ಚಾರಣಕ್ಕೆ ಹೋಗಿದ್ದ ಯುವಕ ನಾಪತ್ತೆಯಾಗಿದ್ದ ಆತನ ಗೆಳೆಯರು ಸುಂಕ ಸಾಲೆ ಗ್ರಾಮಕ್ಕೆ ಬಂದು ಆದಿತ್ಯ ಎಂಬ ಯುವಕ 112 ಪೊಲೀಸ್ ವಾಹನಕ್ಕೆ ಕರೆ ಮಾಡಿದ್ದಾರೆ.10 ಜನ ವಿವಿಧ ಮೂಲಗಳಿಂದ ಬಂದು ಕೆಎಂಸಿ ಆಸ್ಪತ್ರೆಯಲ್ಲಿ MBBS ಅಭ್ಯಾಸ ಮಾಡುತ್ತಿದ್ದು ಫೆ.25 ರಂದು ಬಂಡಾಜೆ ಫಾಲ್ಸ್ ನೋಡಲು ಬಂದಿದ್ದು ಅದರಲ್ಲಿ ಧನುಷ್ ಎಂಬವರು  ಸುಮಾರು 8 ಕಿಮೀ ಕಾಡಿನ ಮಧ್ಯದಲ್ಲಿ  ಅವನ ಮೊಬೈಲ್ ಸ್ವಿಚ್ ಆಫ್ ಆಗಿ ಕಾಣೆಯಾಗಿದ್ದರು. ಪೊಲೀಸರು ಸ್ಥಳಕ್ಕೆ ಹೋಗಿ ಅಲ್ಲಿದ್ದ ಹುಡುಗರನ್ನು ವಿಚಾರಿಸಿದಾಗ ಧನುಷ್ ತಪ್ಪಿಸಿಕೊಂಡಿರುವ ನಿರ್ದಿಷ್ಟ ಸುಮಾರು 3 ಗಂಟೆಗೆ 30 ನಿಮಿಷಗಳ ಕಾಲ ಹುಡುಕಾಟ ನಡೆಸಿದ್ದಾರ. ಕೊನೆಗೆ ಗುಡ್ಡದ ಪ್ರದೇಶದಲ್ಲಿ ಫೆ.25 ರಂದು ಮಧ್ಯರಾತ್ರಿ ಸುಮಾರು 700 ಅಡಿ ಕೆಳಗೆ ದಟ್ಟವಾದ ಅರಣ್ಯ ಮಧ್ಯದಲ್ಲಿ ಒಬ್ಬನೇ ಸಿಕ್ಕಿಕೊಂಡು ನಿಂತಿರುವುದು ಕಂಡಿದೆ. ಅವರ ಬಳಿಗೆ ಹೋಗುತ್ತಿರುವುದು ಕಂಡು ಅವರು ಕೂಡ ಪೊಲೀಸರ ಬಳಿಗೆ ಓಡಿ ಬಂದಿದ್ದಾರೆ. ಬಳಿಕ ಅವರಿಗೆ  ಧೈರ್ಯ ತುಂಬಿ ಕುಡಿಯಲು ನೀರು ಕೊಟ್ಟು ಸಮಾಧಾನಪಡಿಸಿ ಕರೆದುಕೊಂಡು ಬಂದು ಅವರ ಹೆತ್ತವರಿಗೆ ಮಾಹಿತಿ ನೀಡಿ ಕೊಟ್ಟಿಗೆಹಾರಕ್ಕೆ ಕರೆದುಕೊಂಡು ಬಂದು ಅವರು ಮಂಗಳೂರಿಗೆ ಹೋಗಬೇಕೆಂದು ತಿಳಿಸಿದ ಕಾರಣ  ಅವರೆಲ್ಲರನ್ನು ಪೊಲೀಸ್ ಸಿಬ್ಬಂದಿ ಸುರಕ್ಷಿತವಾಗಿ ಕಳುಹಿಸಿ ಕೊಟ್ಟಿದ್ದಾರೆ.

 ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಯಾದ ಮೆಹಬೂಬ್ ಸಾಧನಿ ಶಂಕರ್ ಬೋವಿ ಹಾಗೂ ಸ್ಥಳೀಯರು ಇದ್ದರು.

- Advertisement -
spot_img

Latest News

error: Content is protected !!