Friday, June 5, 2026
Homeಕರಾವಳಿಬೆಳ್ತಂಗಡಿ; ಲಾಯಿಲದಲ್ಲಿ ಯುವಕ ದಿಢೀರ್ ನಾಪತ್ತೆ

ಬೆಳ್ತಂಗಡಿ; ಲಾಯಿಲದಲ್ಲಿ ಯುವಕ ದಿಢೀರ್ ನಾಪತ್ತೆ

- Advertisement -
- Advertisement -

ಬೆಳ್ತಂಗಡಿ; ಯುವಕನೊಬ್ಬ ದಿಢೀರ್ ನಾಪತ್ತೆ ಲಾಯಿಲದಲ್ಲಿ ನಡೆದಿದೆ. ಲಾಯಿಲ ಗ್ರಾಮದ ಕಕ್ಕೇನಾದ ನಿವಾಸಿ ಭರತ್ ಕುಮಾರ್ (33) ನಾಪತ್ತೆಯಾದವರು.

 ಅವರ ಪತ್ತೆಗಾಗಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಅವರ ಸಹೋದರ ರವಿ ನಾಯ್ಕ್ ದೂರು ನೀಡಿದ್ದಾರೆ.ಭರತ್ ಕುಮಾರ್ ಪೈಟಿಂಗ್ ಕೆಲಸ ಮಾಡಿಕೊಂಡಿದ್ದರು. ದಿನಾಂಕ 05.06.2023 ಬೆಳಗ್ಗೆ ಸುಮಾರು 10.30ಕ್ಕೆ ಮನೆಯಲ್ಲಿ ಯಾರಿಗೂ ತಿಳಿಸದೆ ಮನೆಯಿಂದ ಹೊರ ಹೋಗಿದ್ದಾರೆ. ಇದುವರೆಗೆ ವಾಪಸ್ ಬಂದಿಲ್ಲ. ಮೊಬೈಲ್ ಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್‌ ಆಗಿದೆ. ಈ ಮೊದಲು ಕೆಲಸಕ್ಕೆ ಹೋದವನು 2-3 ವಾರ ಬಿಟ್ಟು ಮನೆಗೆ ವಾಪಸ್ಸು ಬರುತ್ತಿದ್ದ. ಹಾಗೆ ಆಗಿರಬಹುದು ಎಂದು ತಿಳಿದು ಪತ್ತೆಗೆ ಪ್ರಯತ್ನಿಸಲಿಲ್ಲ. ಆದರೆ ಇಲ್ಲಿಯವರೆಗೆ ಮನೆಗೆ ವಾಪಸು ಬಾರದೇ ಇರುವುದರಿಂದ ಸಂಬಂಧಿಕರಲ್ಲಿ ವಿಚಾರಿಸಿ ಎಲ್ಲಿಯೂ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ಸಹೋದರ ತಿಳಿಸಿದ್ದಾರೆ.

- Advertisement -

Latest News

error: Content is protected !!