Thursday, June 4, 2026
Homeಕರಾವಳಿಮಂಗಳೂರು; ಫ್ಲ್ಯಾಟ್ ಮೇಲಿಂದ ಆಯತಪ್ಪಿ ಬಿದ್ದು ಯುವಕ ಸಾವು

ಮಂಗಳೂರು; ಫ್ಲ್ಯಾಟ್ ಮೇಲಿಂದ ಆಯತಪ್ಪಿ ಬಿದ್ದು ಯುವಕ ಸಾವು

- Advertisement -
- Advertisement -

ಮಂಗಳೂರು; ಫ್ಲ್ಯಾಟ್ ಮೇಲಿಂದ ಆಯತಪ್ಪಿ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ಮಂಗಳೂರಿನ ಕದ್ರಿಯಲ್ಲಿ ನಡೆದಿದೆ.ಮಂಗಳೂರಿನ ಅಬ್ದುಲ್ ಸಲೀಂ ಎಂಬವರ ಪುತ್ರ ಮುಹಮ್ಮದ್ ಶಮಾಲ್(20) ಮೃತ ಯುವಕ‌.

ಶಮಾಲ್ ಕದ್ರಿಯ ಬಳಿಯ ಫ್ಲ್ಯಾಟ್ ನಲ್ಲಿ ಪೋಷಕರ ಜೊತೆ ವಾಸವಾಗಿದ್ದರು.ಇಂದು ಬೆಳಿಗ್ಗೆ ರಂಝಾನ್ ಹಿನ್ನೆಲೆ ಸಹರಿ ಉಪಾಹಾರ ಸೇವಿಸಿ ಫ್ಲ್ಯಾಟ್ ನ ಹೊರಗೆ ಬಂದ ಶಮಾಲ್ ಆಯತಪ್ಪಿ ಬಿದ್ದಿದ್ದಾರೆ ಎನ್ನಲಾಗಿದೆ‌.ಘಟನಾ ಸ್ಥಳಕ್ಕೆ ಕದ್ರಿ ಠಾಣಾ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ

- Advertisement -

Latest News

error: Content is protected !!