Thursday, June 4, 2026
Homeಕರಾವಳಿಕರ್ತವ್ಯದಲ್ಲಿದ್ದಾಗಲೇ ಕುಸಿದು ಬಿದ್ದು ಪೊಲೀಸ್ ಸಿಬ್ಬಂದಿ ಸಾವು

ಕರ್ತವ್ಯದಲ್ಲಿದ್ದಾಗಲೇ ಕುಸಿದು ಬಿದ್ದು ಪೊಲೀಸ್ ಸಿಬ್ಬಂದಿ ಸಾವು

- Advertisement -
- Advertisement -

ಕಡಬ; ಕರ್ತವ್ಯದಲ್ಲಿದ್ದಾಗಲೇ ಕುಸಿದು ಬಿದ್ದು ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ಕಾಸರಗೋಡಿನ ಆದೂರಿನಲ್ಲಿ ನಡೆದಿದೆ.ಆದೂರು ಪೊಲೀಸ್ ಠಾಣಾ ಪೊಲೀಸ್ ಸಿಬ್ಬಂದಿ ಕೆ.ಅಶೋಕ್ (48) ಮೃತ ದುರ್ದೈವಿ.


ಬೆಳಗಿನ ಜಾವದವರೆಗೆ ಸಹೋದ್ಯೋಗಿಗಳೊಂದಿಗೆ ಕರ್ತವ್ಯದಲ್ಲಿದ್ದ ಅಶೋಕ್, 5 ಗಂಟೆಗೆ ಶೌಚಾಲಯಕ್ಕೆ ಹೋಗಿದ್ದಾರೆ. ಆರು ಗಂಟೆಯಾದರೂ ಅವರನ್ನು ಕಾಣದಿದ್ದಾಗ ಅವರು ವಿಶ್ರಾಂತಿ ಕೊಠಡಿಯೊಳಗೆ ಇದ್ದಾರೆ ಎಂದು  ನೋಡಿದಾಗ ಅಲ್ಲಿಯೂ ಅಶೋಕ್ ಅವರು ಇರಲಿಲ್ಲ .

ಬಳಿಕ ಶೌಚಾಲಯದಲ್ಲೇ ಇರುವುದನ್ನು ಗಮನಿಸಿ ಬಾಗಿಲನ್ನು ಒಡೆದು  ತಕ್ಷಣವೇ ಮುಳ್ಳೇರಿಯಾ ಸಹಕಾರಿ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಲಾಯಿತಾದರೂ ಆಗಲೇ ಮೃತ ಪಟ್ಟಿದ್ದರು. ಪೆರ್ಲಡ್ಕ ಪೊಯಿನಾ ನಿವಾಸಿಯಾಗಿರುವ ಅಶೋಕ್, ರಾಮನ್ ಮಣಿಯಾಣಿ ಮತ್ತು ಕಲ್ಯಾಣಿ ದಂಪತಿಯ ಪುತ್ರರಾಗಿದ್ದಾರೆ. ಮೃತರು ಪತ್ನಿ  ಸೌಮ್ಯ. ಮಕ್ಕಳಾದ ತೇಜಲಕ್ಷ್ಮಿ ಮತ್ತು ಗೌತಮ್ ಅವರನ್ನು ಅಗಲಿದ್ದಾರೆ.

- Advertisement -

Latest News

error: Content is protected !!