Thursday, June 4, 2026
Homeಕರಾವಳಿಸುಳ್ಯ; ಕೆರೆಗೆ ಕಾಲು ಜಾರಿ ಬಿದ್ದು ಯುವಕ ಸಾವು

ಸುಳ್ಯ; ಕೆರೆಗೆ ಕಾಲು ಜಾರಿ ಬಿದ್ದು ಯುವಕ ಸಾವು

- Advertisement -
- Advertisement -

ಸುಳ್ಯ; ತೋಟದಲ್ಲಿ ಕೆರೆಗೆ ಕಾಲು ಜಾರಿ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ಸುಳ್ಯದ ಉಬರಡ್ಕದಲ್ಲಿ ನಡೆದಿದೆ.ಸುಳ್ಯ ಶಾಂತಿನಗರ ನಿವಾಸಿ ದಿ. ನಾರಾಯಣ ಮುಕರಿಯವರ ಪುತ್ರ ಯೋಗೀಶ್‌(36) ಮೃತಪಟ್ಟ ಯುವಕ.

ಯೋಗೀಶ್ ಸುಳ್ಯ ಚೆನ್ನಕೇಶವ ದೇವಸ್ಥಾನದಲ್ಲಿ ಸಹಾಯಕನಾಗಿ ಕೆಲಸ ಮಾಡಿಕೊಂಡಿದ್ದು, ಅವರನ್ನು ರಮೇಶ್‌ ಬೈಪಡಿತ್ತಾಯ ಎಂಬವರು ಉಬರಡ್ಕಕ್ಕೆ ಮರ ಕಡಿದ ಜಾಗದ ಅಳತೆಗಾಗಿ ಕರೆದುಕೊಂಡು ಹೋಗಿದ್ದರೆನ್ನಾಗಿದೆ. ಅಳತೆ ಮಾಡುವ ಸಂದರ್ಭದಲ್ಲಿ ಚೈಪೆ ಸುಂದರಿಯವರ ತೋಟವನ್ನು ಹಾದು ಹೋಗಬೇಕಾಗಿದ್ದು, ಆ ಸಂದರ್ಭ ಅವರು ಕಾಲು ಜಾರಿ ತೋಟದ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!