Friday, June 26, 2026
Homeಪ್ರಮುಖ-ಸುದ್ದಿಶಿವರಾತ್ರಿ ಹಬ್ಬದಂದೇ ಸಿಹಿ ಸುದ್ದಿ ಕೊಟ್ಟ ಡಾರ್ಲಿಂಗ್ ಕೃಷ್ಣ -ಮಿಲನ ದಂಪತಿ; ತಾಯಿಯಾಗ್ತಿದ್ದಾರೆ ನಟಿ ಮಿಲನ...

ಶಿವರಾತ್ರಿ ಹಬ್ಬದಂದೇ ಸಿಹಿ ಸುದ್ದಿ ಕೊಟ್ಟ ಡಾರ್ಲಿಂಗ್ ಕೃಷ್ಣ -ಮಿಲನ ದಂಪತಿ; ತಾಯಿಯಾಗ್ತಿದ್ದಾರೆ ನಟಿ ಮಿಲನ ನಾಗರಾಜ್

- Advertisement -
- Advertisement -

ಬೆಂಗಳೂರು; ಶಿವರಾತ್ರಿ ಹಬ್ಬದಂದೇ ಡಾರ್ಲಿಂಗ್ ಕೃಷ್ಣ ಮಿಲನ ದಂಪತಿ ಸಿಹಿ ಸುದ್ದಿ ಕೊಟ್ಟಿದ್ದಾರೆ. ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಶುಭ ಸುದ್ದಿಯನ್ನು ನಟಿ ಮಿಲನಾ ನಾಗರಾಜ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ ಮಗುವಿನ ಶರ್ಟ್ ಫೋಟೋವೊಂದನ್ನ ಹಂಚಿಕೊಂಡು ‘KrissMi’ ಎಂದು ಬರೆದು ಹಾರ್ಟ್ ಮಾರ್ಕ್ ಹಾಕಿ ಸೆಪ್ಟೆಂಬರ್ 2024 ಎಂದು ಬರೆದಿದ್ದಾರೆ.ಈ ಮೂಲಕ ತಮ್ಮ ಜೀವನದಲ್ಲಿ ಪುಟ್ಟ ಕಂದನ ಆಗಮನವಾಗಲಿದೆ ಎಂದು ತಿಳಿಸಿದ್ದಾರೆ. ಜೋಡಿಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರ್ತಿದೆ.

 ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ 2021ರ ಫೆಬ್ರವರಿ 14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು.. ಇದೀಗ ಮೂರು ವರ್ಷಗಳ ಬಳಿಕ ಈ ದಂಪತಿ ಗುಡ್ ನ್ಯೂಸ್ ನೀಡಿದ್ದಾರೆ. ಮಿಲನಾ ನಾಗರಾಜ್ ಹಾಗೂ ಕೃಷ್ಣ ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇಬ್ಬರೂ ಕೆಲವು ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದು ಇವರೇ ನಿರ್ದೇಶಿಸಿ, ನಿರ್ಮಾಣ ಮಾಡಿ ನಟಿಸಿದ್ದ ಲವ್ ಮಾಕ್ಟೇಲ್ ಹಿಟ್ ಮೂವಿಯಾಗಿದೆ.

- Advertisement -

Latest News

error: Content is protected !!