Thursday, June 4, 2026
Homeಕರಾವಳಿಉಡುಪಿಉಡುಪಿ: ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವು

ಉಡುಪಿ: ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವು

- Advertisement -
- Advertisement -

ಉಡುಪಿ: ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿರುವ ಘಟನೆ ಉಚ್ಚಿಲ ಮುಳ್ಳಗುಡ್ಡೆ ಎಂಬಲ್ಲಿ ನಡೆದಿದೆ.ಮೃತರನ್ನು ಉಚ್ಚಿಲ ಮುಳ್ಳಗುಡ್ಡೆಯ ನಿವಾಸಿ ಶಾಬನ್ ಬ್ಯಾರಿ ಎಂಬವರ ಮಗ ಅಶ್ರಫ್(39) ಮೃತ ದುರ್ದೈವಿ.

ರಕ್ತಹೀನತೆ ಖಾಯಿಲೆಯಿಂದ ಬಳಲುತ್ತಿದ್ದ ಅಶ್ರಫ್ ಅವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 4 ತಿಂಗಳುಗಳಿಂದ ತೀರಾ ಅನಾರೋಗ್ಯದಿಂದ ಕೆಲಸ ಮಾಡಲಾಗದೇ ಮನೆಯಲ್ಲಿಯೇ ಇದ್ದರು. ಜೂ.7ರಂದು ಸಂಜೆ ಜ್ವರ ಬಂದ ಕಾರಣ ಇವರು, ಜ್ವರದ ಔಷಧಿ ಕುಡಿದು ರಾತ್ರಿ ಮನೆಯಲ್ಲಿ ಮಲಗಿದ್ದು, ಜೂ.8ರ ನಸುಕಿನ ವೇಳೆ ತೀರಾ ಅಸ್ವಸ್ಥಗೊಂಡ ಇವರು, ಮಣಿಪಾಲದ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!