Saturday, June 6, 2026
Homeಕರಾವಳಿಬೆಳ್ತಂಗಡಿ : ನಗರದಲ್ಲಿ ಮತ್ತೆ ಕಳ್ಳರ ಕೈಚಳಕ: ಬ್ಯಾಟರಿ ಅಂಗಡಿಯ ಶಟರ್ ಮುರಿದು ಕಳ್ಳತನಕ್ಕೆ ಯತ್ನ

ಬೆಳ್ತಂಗಡಿ : ನಗರದಲ್ಲಿ ಮತ್ತೆ ಕಳ್ಳರ ಕೈಚಳಕ: ಬ್ಯಾಟರಿ ಅಂಗಡಿಯ ಶಟರ್ ಮುರಿದು ಕಳ್ಳತನಕ್ಕೆ ಯತ್ನ

- Advertisement -
- Advertisement -

ಬೆಳ್ತಂಗಡಿ : ಕಳ್ಳರ ಕೈಚಳಕ ಮತ್ತೆ ಬೆಳ್ತಂಗಡಿ ನಗರದಲ್ಲಿ ಮುಂದುವರೆದಿದ್ದು ಬೆಳ್ತಂಗಡಿ ಬ್ಯಾಟರ್ ಅಂಗಡಿಯೊಂದಕ್ಕೆ ಕಳ್ಳರು ನುಗ್ಗಲು ಪ್ರಯತ್ನಿಸಿದ್ದು, ಆದ್ರೆ ಒಳಹೋಗಲು ಸಾಧ್ಯವಾಗದೆ ಬರಿಗೈಯಲ್ಲಿ ವಾಪಾಸ್ ಹೋಗುವಂತಾಗಿದೆ.

ಬೆಳ್ತಂಗಡಿ ನಗರದ ಅಯ್ಯಪ್ಪಗುಡಿಯ ಹತ್ತಿರದ ಮಂಜುನಾಥ ಕಾಂಪ್ಲೆಕ್ಸ್ ನಲ್ಲಿರುವ ಶೀತಲ್ ಜೈನ್ ಮಾಲೀಕತ್ವದ ಪವರ್ ಆನ್ ಬ್ಯಾಟರಿ ಅಂಗಡಿಗೆ ಜೂನ್.9 ರಂದು ಮಧ್ಯರಾತ್ರಿ ಶಟರ್ ಬೀಗ ಮುರಿದು ಒಳಗಿನಲ್ಲಿ ಗ್ಲಾಸ್ ಡೋರ್ ಇದ್ದು ಅದನ್ನು ಮುರಿಯಲು ಯತ್ನಿಸಿದ್ದಾರೆ. ಆದ್ರೆ ಕಳ್ಳರಿಗೆ ಒಳಹೋಗಲು ಸಾಧ್ಯವಾಗಿಲ್ಲ. ಕೊನೆಗೆ ಬರಿಗೈಯಲ್ಲಿ ವಾಪಾಸ್ ಹೋಗುವಂತಾಗಿದೆ.

ಇಂದು  ಬೆಳಗ್ಗೆ ಜೂನ್.10 ರಂದು ಎಂದಿನಂತೆ ಅಂಗಡಿ ಓಪನ್ ಮಾಡಲು ಬಂದಾಗ ಕಳ್ಳತನ ಯತ್ನ  ಪ್ರಕರಣ ಬೆಳಕಿಗೆ ಬಂದಿದೆ. ಮಳೆ ಇದ್ದ ಕಾರಣ ಅಂಗಡಿಯಲ್ಲಿದ್ದ ಸಿಸಿ ಕ್ಯಾಮೆರಾ ಆಫ್ ಮಾಡಿ ಹೋಗಿದ್ದು ಕಳ್ಳರ ಬಗ್ಗೆ ಯಾವುದೇ ಕುರುಹು ಪತ್ತೆ ಅಸಾಧ್ಯವಾಗಿದೆ. ಕಳ್ಳತನವಾಗದ ಹಿನ್ನಲೆಯಲ್ಲಿ ದೂರು  ನೀಡಿಲ್ಲ. ಈ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ಮಾಲೀಕರಾದ ಶೀತಲ್ ಜೈನ್ ಮಾಹಿತಿ ನೀಡಿದ್ದಾರೆ.

- Advertisement -

Latest News

error: Content is protected !!