Wednesday, June 24, 2026
Homeಅಪರಾಧಬೆಳ್ತಂಗಡಿ : ಇಲಿ ಪಾಷಣ ತಿಂದು ಯುವಕ ಆತ್ಮಹತ್ಯೆಗೆ ಯತ್ನ: ಚಿಕಿತ್ಸೆ ಫಲಿಸದೆ ಯುವಕ ಆಸ್ಪತ್ರೆಯಲ್ಲಿ...

ಬೆಳ್ತಂಗಡಿ : ಇಲಿ ಪಾಷಣ ತಿಂದು ಯುವಕ ಆತ್ಮಹತ್ಯೆಗೆ ಯತ್ನ: ಚಿಕಿತ್ಸೆ ಫಲಿಸದೆ ಯುವಕ ಆಸ್ಪತ್ರೆಯಲ್ಲಿ ಸಾವು

- Advertisement -
- Advertisement -

ಬೆಳ್ತಂಗಡಿ : ಲವ್ ವಿಚಾರದಲ್ಲಿ ಮನನೊಂದು ಬೆಳ್ತಂಗಡಿಯ ಯುವಕ‌ ಮಂಗಳೂರಲ್ಲಿ ಕಳೆದ ಫೇ.12 ನೇ ಶನಿವಾರದಂದು ತನ್ನ ಆಟೋ ರಿಕ್ಷಾದಲ್ಲಿ ಇಲಿ ಪಾಷಣ ತಿಂದು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇಂದು ರಾತ್ರಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.

ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ದೇವಗಿರಿ ನಿವಾಸಿ ಜೋಬಿಷ್ ಕಡುವಪ್ಪಾರ(26) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ಯುವಕ.

ಕಳೆದ ಆರು ವರ್ಷಗಳಿಂದ ಮಂಗಳೂರಲ್ಲಿ ಎರಡು ಆಟೋವನ್ನು ಖರೀದಿಸಿ ಕಂಕನಾಡಿ ವ್ಯಾಪ್ತಿಯಲ್ಲಿ ಬಾಡಿಗೆ ಮಾಡುತ್ತಿದ್ದ ಯುವತಿ ಪ್ರೀತಿ ವಿಚಾರದಲ್ಲಿ ಮನನೊಂದು ತನ್ನ ಆಟೋದಲ್ಲಿ ವಿಷ ಆಹಾರ ಸೇವಿಸಿದ್ದ ಎನ್ನಲಾಗಿದೆ ತಕ್ಷಣ ಗೆಳೆಯರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು ಆದ್ರೆ ಆತನ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದು ನಂತರ ಆರೋಗ್ಯ ಹಾದಗೆಟ್ಟ ಹಿನ್ನಲೆ ವಾಪಸ್ ವೆನ್ಲಾಕ್ ಆಸ್ಪತ್ರೆಗೆ ದಾಖಲಾದ ವೈದ್ಯರು ಹೆಚ್ಚಿನ ಚಿಕಿತ್ಸೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದರು ಆದ್ರೆ ಚಿಕಿತ್ಸೆ ಫಲಿಸದೆ ಇಂದು ರಾತ್ರಿ ಮೃತಪಟ್ಟಿದ್ದಾನೆ.

- Advertisement -

Latest News

error: Content is protected !!