Wednesday, June 3, 2026
Homeತಾಜಾ ಸುದ್ದಿಎಸ್​ಡಿಎಂ ಕ್ಷೇಮವನ ಉದ್ಘಾಟನೆ ವೇಳೆ ವೀರೇಂದ್ರ ಹೆಗ್ಗಡೆಯನ್ನು ಹಾಡಿಹೊಗಳಿದ ಯೋಗಿ ಆದಿತ್ಯನಾಥ್

ಎಸ್​ಡಿಎಂ ಕ್ಷೇಮವನ ಉದ್ಘಾಟನೆ ವೇಳೆ ವೀರೇಂದ್ರ ಹೆಗ್ಗಡೆಯನ್ನು ಹಾಡಿಹೊಗಳಿದ ಯೋಗಿ ಆದಿತ್ಯನಾಥ್

- Advertisement -
- Advertisement -

ಬೆಂಗಳೂರು: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ನೆಲಮಂಗಲದಲ್ಲಿ ಎಸ್ಡಿಎಂ ಕ್ಷೇಮವನ ಉದ್ಘಾಟನಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. ಇದೇ ವೇಳೆ ಕಾರ್ಯಕ್ರಮದಲ್ಲಿ ಭಾರತದ ಪಾರಂಪರಿಕ ವೈದ್ಯಕೀಯ ಪದ್ಧತಿಯನ್ನು ಮುನ್ನೆಲೆಗೆ ತಂದಿದ್ದಕ್ಕಾಗಿ ವೀರೇಂದ್ರ ಹೆಗ್ಗಡೆಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಧರ್ಮಾಧಿಕಾರಿಯ ರೂಪದಲ್ಲಿ ವೀರೇಂದ್ರ ಹೆಗ್ಗಡೆ ಪಾರಂಪರಿಕ ವೈದ್ಯ ಪದ್ದತಿಯನ್ನು ಪರಿಚಯಿಸಿದ್ದಾರೆ. ವೀರೇಂದ್ರ ಹೆಗ್ಗಡೆ ಕೂಡಾ ಯೋಗಿಯ ರೂಪದಲ್ಲಿ ಧರ್ಮಸ್ಥಳದ ಮೂಲಕ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು ಐಟಿ-ಬಿಟಿ ಹಬ್ ಆಗಿದೆ. ಈಗ ಸಾಂಪ್ರದಾಯಿಕ ವೈದ್ಯ ಪದ್ಧತಿಯ ಹಬ್ ಆಗುವ ಅವಕಾಶ ಸಿಕ್ಕಿದೆ. ಭಾರತೀಯ ಯೋಗ ಪರಂಪರೆಯ ಮೂಲಕ ವಿಶ್ವದ ಜನರು ಒಂದಾಗಿದ್ದಾರೆ. ಸ್ವಸ್ಥ ಶರೀರ ಎಲ್ಲವನ್ನೂ ಸಂಪನ್ನಗೊಳಿಸುತ್ತದೆ ಎಂದರು.

- Advertisement -

Latest News

error: Content is protected !!