Wednesday, June 3, 2026
Homeಕರಾವಳಿನಾಳೆ ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ: ಪೊಲೀಸರಿಗೆ ಎಡಿಜಿಪಿ ಅಲೋಕ್‌ಕುಮಾರ್ ಖಡಕ್‌ ಸೂಚನೆ‌

ನಾಳೆ ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ: ಪೊಲೀಸರಿಗೆ ಎಡಿಜಿಪಿ ಅಲೋಕ್‌ಕುಮಾರ್ ಖಡಕ್‌ ಸೂಚನೆ‌

- Advertisement -
- Advertisement -

ಮಂಗಳೂರು : ನಾಳೆ ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ‌ ನೀಡುತ್ತಿದ್ದು ಈಗಾಗಲೇ ಸಕಲ ಸಿದ್ಧತೆ, ಭದ್ರತೆ ನಿಟ್ಟಿನಲ್ಲಿ ADGP ಅಲೋಕ್‌ ಕುಮಾರ್‌ ಪೊಲೀಸರಿಗೆ ಖಡಕ್‌ ಸೂಚನೆ ನೀಡಿದ್ದಾರೆ.

ಮೋದಿ ಕಾರ್ಯಕ್ರಮಕ್ಕಾಗಿ ಬಂಗ್ರ ಕೂಳೂರಿನ ಗೋಲ್ಡ್‌ ಪಿಂಚ್‌ ಸಿಟಿ ಮೈದಾನದಲ್ಲಿ ಬೃಹತ್‌ ವೇದಿಕೆ ಸಿದ್ದಪಡಿಸಲಾಗಿದೆ ಈ ಅದ್ದೂರಿ ಕಾರ್ಯಕ್ರಮಕ್ಕೆ 1 ಲಕ್ಷಕ್ಕೂ ಹೆಚ್ಚು ಜನರ ಸೇರೋ ನಿರೀಕ್ಷೆ ಇದೆ.

25 ಎಕರೆ ಪ್ರದೇಶದಲ್ಲಿ ಬೃಹತ್‌ ವೇದಿಕೆಯನ್ನು ಸಿದ್ಧತೆ ಮಾಡಲಾಗಿದೆ. ಮೈದಾನ ವೀಕ್ಷಣೆಗೆ ಎಡಿಜಿಪಿ ಅಲೋಕ್‌ ಕುಮಾರ್‌ ಆಗಮಿಸಿ ಭದ್ರತೆಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಇಷ್ಟು ದೊಡ್ಡ ಮೈದಾನದಲ್ಲಿ ಎರಡೇ ಸಿಸಿಟಿವಿ ಹಾಕಿದ್ದೀರಿ. ತಕ್ಷಣ ಮೈದಾನದ ಎಲ್ಲಾ ಭಾಗಗಳಿಗೆ ಸಿಸಿಟಿವಿ ಹಾಕಿ ಎಂದು ಪೊಲೀಸರಿಗೆ ಎಡಿಜಿಪಿ ಅಲೋಕ್‌ ಕುಮಾರ್‌ ಖಡಕ್‌ ಎಚ್ಚರಿಕೆ ನೀಡಿದ್ದಾರೆ

ಯಾರು ಮೊಬೈಲ್‌ನಲ್ಲಿ ಫೋಟೊ ತೆಗೆಯಬಾರದು ನಿಮ್ಮ ಕಣ್ಣು ಮೈದಾನದ ಜನರ ಮೇಲಿರಬೇಕು. ಕಾರ್ಯಕ್ರಮಕ್ಕೆ ಬಂದರಿಗೆ ಕಿರಿಕ್‌ ಮಾಡಬಾರದು ಗೊಂದಲ ಸೃಷ್ಠಿಯಾಗದ್ರೆ ಯಾರ ಮೇಲೂ ಕೈ ಮಾಡಬಾರದು. ಕಾರ್ಯಕ್ರಮಕ್ಕೆ ಬರುವವರ ಸಂಪೂರ್ಣ ತಪಾಸಣೆ ನಡೆಸಬೇಕೆಂದು ಪೊಲೀಸರಿಗೆ ಎಡಿಜಿಪಿ ಅಲೋಕ್‌ ಕುಮಾರ್‌ ಖಡಕ್‌ ಎಚ್ಚರಿಕೆ ನೀಡಿದ್ದಾರೆ

- Advertisement -

Latest News

error: Content is protected !!