Friday, August 28, 2026
HomeUncategorizedಸುಳ್ಯ: ಯಕ್ಷಗಾನ ಕಲಾವಿದ ವಾಸುದೇವ ರೈ ಬೆಳ್ಳಾರೆಯವರ ಪುತ್ರ ಸೂರಜ್ ರೈ ಅಪಘಾತಕ್ಕೆ ಬಲಿ

ಸುಳ್ಯ: ಯಕ್ಷಗಾನ ಕಲಾವಿದ ವಾಸುದೇವ ರೈ ಬೆಳ್ಳಾರೆಯವರ ಪುತ್ರ ಸೂರಜ್ ರೈ ಅಪಘಾತಕ್ಕೆ ಬಲಿ

- Advertisement -
- Advertisement -

ಸುಳ್ಯ: ಯಕ್ಷಗಾನ ಕಲಾವಿದ ವಾಸುದೇವ ರೈ ಬೆಳ್ಳಾರೆಯವರ ಪುತ್ರ ಸೂರಜ್ ರೈ ಅಪಘಾತಕ್ಕೆ ಬಲಿಯಾಗಿದ್ದಾರೆ. ಸೂರಜ್ ರೈಯವರು (27) ಮೃತ ದುರ್ದೈವಿ.

ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಉದ್ಯೋಗಿಯಾಗಿದ್ದ ಅವರು ಮೇ. 15ರಂದು ರಾತ್ರಿ ಬೆಂಗಳೂರಿಗೆ ತನ್ನ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಕುಣಿಗಲ್ ಬಳಿ ಕೋಳಿ ಸಾಗಾಟದ ವಾಹನಕ್ಕೆ ಡಿಕ್ಕಿಯಾಗಿ ತಲೆಗೆ ತೀವ್ರ ಗಾಯವಾಗಿ ಕುಣಿಗಲ್ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಕಳೆದ ರಾತ್ರಿ ಸಾವನ್ನಪ್ಪಿದ್ದಾರೆ. ಇಂದು ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ರುದ್ರ ಭೂಮಿಯಲ್ಲಿ ಶವ ಸಂಸ್ಕಾರ ನಡೆಯಲಿದೆಯೆಂದು ಕುಟುಂಬದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಮೃತರು ಪತ್ನಿ ಸ್ನೇಹ, ತಂದೆ ಯಕ್ಷಗುರು ವಾಸುದೇವ ರೈ ವಿ, ತಾಯಿ ಶ್ರೀಮತಿ ಶರ್ಮಿಳಾ ರೈ, ಓರ್ವ ಸಹೋದರ ಸುದೀಪ್‌ ರೈ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.

- Advertisement -

Latest News

error: Content is protected !!