Tuesday, June 23, 2026
HomeUncategorizedಬಂಟ್ವಾಳ; ಕಂಚಿಕಾರ ಪೇಟೆಯ ಬಳಿ ನದಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ಬಂಟ್ವಾಳ; ಕಂಚಿಕಾರ ಪೇಟೆಯ ಬಳಿ ನದಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

- Advertisement -
- Advertisement -

ಬಂಟ್ವಾಳ; ಕಂಚಿಕಾರ ಪೇಟೆಯ ಬಳಿ ನದಿ ಬದಿಯಲ್ಲಿ  ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿರುವ ಘಟನೆ ದಿನಾಂಕ 21.05.2026 ರಂದು ಬೆಳಿಗ್ಗೆ ನಡೆದಿದೆ.

ಬಂಟ್ವಾಳ, ಬಿ ಮೂಡ ಗ್ರಾಮದ ಕಂಚಿಕಾರ ಪೇಟೆಯ ಬಳಿ ನದಿ ಬದಿಯಲ್ಲಿ ಅಪರಿಚಿತ ವ್ಯಕ್ತಿಯೋರ್ವನ ಮೃತದೇಹ ನೀರಿನಲ್ಲಿ ತೇಲುತ್ತಿರುವ ಬಗ್ಗೆ ಪ್ರಕರಣದ  ಬಂಟ್ವಾಳ ಕಸಬಾ ನಿವಾಸಿ ಸಾಕೀರ್(37) ಎಂಬವರಿಗೆ ಆತನ ಸ್ನೇಹಿತ ತಿಳಿಸಿದ್ದು,  ಸಾಕೀರ್ ಹಾಗೂ ಇತರರು ಹೋಗಿ ನೋಡಿದಾಗ ಸುಮಾರು 50-55 ವರ್ಷದ ವ್ಯಕ್ತಿಯೋರ್ವರ ಮೃತದೇಹ ಕಂಡುಬಂದಿರುತ್ತದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಪೋಲಿಸ್ ಠಾಣೆಯಲ್ಲಿ ಯು.ಡಿ.ಆರ್ NO 16/2026 ಕಲಂ :194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.

ಮೃತಪಟ್ಟ ವ್ಯಕ್ತಿಯ ಗುರುತು ಪತ್ತೆ ಮಾಡಲಾಗಿದ್ದು  ಬಂಟ್ವಾಳ ಗೂಡಿನಬಳಿ ನಿವಾಸಿ ಇರ್ಫಾನ್ (39) ಎಂಬುವುದು ಗೊತ್ತಾಗಿದ್ದು  ಮೃತ ವ್ಯಕ್ತಿಯ ತಂದೆ ಗುರುತಿಸಿರುತ್ತಾರೆ. ಮೃತ ವ್ಯಕ್ತಿಯ ಮರಣದಲ್ಲಿ ಕುಟುಂಬ ಸದಸ್ಯರುಗಳು ಸಂಶಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಮೃತದೇಹವನ್ನು ಸೂಕ್ತ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ವರದಿಯನ್ನು ಪಡೆದು ಮುಂದಿನ ಕಾನೂನುಕ್ರಮ ಕೈಗೊಳ್ಳಲಾಗುವುದು.

- Advertisement -

Latest News

error: Content is protected !!