ತಿರುವನಂತಪುರಂ: 16ನೇ ಕೇರಳಂ ವಿಧಾನಸಭೆಯ ಸ್ಪೀಕರ್ ಮತ್ತು ಡೆಪ್ಯುಟಿ ಸ್ಪೀಕರ್ ಸ್ಥಾನಕ್ಕೆ ಇಂದು ಚುನಾವಣೆ ನಡೆಯುತ್ತಿದೆ. ಮೂರೂ ಒಕ್ಕೂಟಗಳಿಂದಲೂ ಸ್ಪೀಕರ್ ಸ್ಥಾನಕ್ಕೆ ಅಭ್ಯರ್ಥಿ ಕಣಕ್ಕಿಳಿಸಲಾಗಿದೆ.
ಆಡಳಿತಾರೂಢ ಯುಡಿಎಫ್ ನಿಂದ ಹಿರಿಯ ಶಾಸಕ ತಿರುವಾಂಚೂರ್ ರಾಧಾಕೃಷ್ಣನ್ ಅಭ್ಯರ್ಥಿಯಾಗಿದ್ದು, ವಿಪಕ್ಷ ಎಲ್ ಡಿಎಫ್ ನಿಂದ ಶಾಸಕ ಎ.ಸಿ. ಮೊಯ್ದೀನ್ ಅಭ್ಯರ್ಥಿಯಾಗಿದ್ದಾರೆ. ಮೊದಲ ಬಾರಿಗೆ ಕೇರಳಂ ವಿಧಾನಸಭೆಯಲ್ಲಿ ಬಿಜೆಪಿ ಸ್ಪೀಕರ್ ಸ್ಥಾನಕ್ಕೆ ಸ್ಫರ್ಧಿಸುತ್ತಿದ್ದು ಶಾಸಕ ಬಿ.ಬಿ. ಗೋಪಕುಮಾರ್ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.
ಡೆಪ್ಯುಟಿ ಸ್ಪೀಕರ್ ಸ್ಥಾನಕ್ಕೆ ಶನಿಮೋಳ್ ಒಸ್ಮಾನ್ ಯುಡಿಎಫ್ ಅಭ್ಯರ್ಥಿಯಾಗಿದ್ದು, ಡೆಪ್ಯುಟಿ ಸ್ಪೀಕರ್ ಸ್ಥಾನಕ್ಕೇರುತ್ತಿರುವ ಎರಡನೇ ಮುಸ್ಲಿಂ ಮಹಿಳೆಯಾಗಿದ್ದಾರೆ.
140 ಸದಸ್ಯ ಬಲದ ಕೇರಳಂ ವಿಧಾನಸಭೆಯಲ್ಲಿ ಯುಡಿಎಫ್ 102, ಎಲ್ ಡಿಎಫ್ 35 ಮತ್ತು ಬಿಜೆಪಿ 3 ಶಾಸಕರನ್ನು ಹೊಂದಿವೆ. ಸದ್ಯ ಜಿ. ಸುಧಾಕರನ್ ಹಂಗಾಮಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.


