Thursday, June 25, 2026
Homeಉತ್ತರ ಕನ್ನಡಕಾರವಾರ: ಮುರ್ಡೇಶ್ವರಕ್ಕೆ ಬಂದ ನವವಿವಾಹಿತೆ ನಾಪತ್ತೆ...!

ಕಾರವಾರ: ಮುರ್ಡೇಶ್ವರಕ್ಕೆ ಬಂದ ನವವಿವಾಹಿತೆ ನಾಪತ್ತೆ…!

- Advertisement -
- Advertisement -

ಕಾರವಾರ: ಪತಿಯೊಂದಿಗೆ ಉತ್ತರ ಕನ್ನಡದ ಪ್ರಸಿದ್ಧ ಪ್ರವಾಸಿ ತಾಣ ಮುರ್ಡೇಶ್ವರಕ್ಕೆ ಹನಿಮೂನ್‌ಗೆ ಬಂದ ನವವಿವಾಹಿತೆ ಕಾಣೆಯಾಗಿದ್ದಾಳೆ, ಈ ಬಗ್ಗೆ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಗೋವಾದಿಂದ ಮುರ್ಡೇಶ್ವರಕ್ಕೆ ಬಂದಿದ್ದ ವೇಳೆ ಪಾರ್ಕಿಂಗ್ ಸ್ಥಳದಲ್ಲಿ ಕಾರು ನಿಲ್ಲಿಸಿ ರೂಮ್ ನೋಡಲು ಪತಿ ಗೆಸ್ಟ್ ಹೌಸ್ ಗೆ ಹೋಗಿ ವಾಪಸ್ ಬಂದು ನೋಡಿದಾಗ ಪಾರ್ಕಿಂಗ್ ಸ್ಥಳದ ಕಟ್ಟೆ ಮೇಲೆ ಕುಳಿತಿದ್ದ, ಮಹಿಳೆ ಏಕಾಏಕಿ ಕಾಣೆಯಾಗಿದ್ದಾಳೆ.

ನಾಪತ್ತೆಯಾದ ಯುವತಿಯನ್ನು ಗೋವಾದ ವಾಸ್ಕೋಡಗಾಮ ಬೈನಾದ ನಿವಾಸಿ ವಿದ್ಯಾ ಸಂದೀಪ ಹರಿಜನ ಎಂದು ಹೇಳಲಾಗಿದೆ. ಎಷ್ಟು ಹುಡುಕಿದರೂ ಮಹಿಳೆ ಪತ್ತೆಯಾಗಿಲ್ಲ. ಹೀಗಾಗಿ ಮುರ್ಡೇಶ್ವರ ಠಾಣೆಯಲ್ಲಿ ಆಕೆಯ ಪತಿ ದೂರು ದಾಖಲಿಸಿದ್ದು, ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ

- Advertisement -

Latest News

error: Content is protected !!