Saturday, August 29, 2026
Homeಕರಾವಳಿಮಂಗಳೂರು: ಜಾರಾ ಕನ್ವೆನ್ಷನ್ ಸೆಂಟರ್‌ನಲ್ಲಿ ಸಾಮೂಹಿಕ ವಿವಾಹ, ದಾಂಪತ್ಯ ಜೀವನಕ್ಕೆ ಕಾಲಿಟ್ಟ 15 ಜೋಡಿಗಳು !

ಮಂಗಳೂರು: ಜಾರಾ ಕನ್ವೆನ್ಷನ್ ಸೆಂಟರ್‌ನಲ್ಲಿ ಸಾಮೂಹಿಕ ವಿವಾಹ, ದಾಂಪತ್ಯ ಜೀವನಕ್ಕೆ ಕಾಲಿಟ್ಟ 15 ಜೋಡಿಗಳು !

- Advertisement -
- Advertisement -

ಮಂಗಳೂರು: ಜರಾ ಚಾರಿಟೇಬಲ್ ಫೌಂಡೇಶನ್ ಮಂಗಳೂರು ಇದರ ವತಿಯಿಂದ ಡಿಸೆಂಬರ್ 27 ರಂದು ಸೋಮವಾರ ಜಾರಾ ಕನ್ವೆನ್ಷನ್ ಸೆಂಟರ್‌ನಲ್ಲಿ ಸಾಮರಸ್ಯಕ್ಕಾಗಿ ಸರ್ವಧರ್ಮ ಸಾಮೂಹಿಕ ವಿವಾಹ ನಡೆಯಿತು.

ಸಾಮೂಹಿಕ ವಿವಾಹ ಸಮಾರಂಭವನ್ನು ಬೆಂಗಳೂರಿನ ಅವಧೂತ ಶ್ರೀ ವಿನಯ ಗುರೂಜಿ ಉದ್ಘಾಟಿಸಿದರು, ಖಾಝಿ ಉಡುಪಿ ಜಿಲ್ಲಾ ಝೈನುಲ್ ಉಲಮಾ ಎಂ ಅಬ್ದುಲ್ ಹಮೀದ್ ಮುಸ್ಲಿಯಾರ್ ದುವಾ ನೀಡಿದರು.

ಸಾಮೂಹಿಕ ವಿವಾಹದಲ್ಲಿ 10 ಮುಸ್ಲಿಂ ಜೋಡಿಗಳು ಮತ್ತು 5 ಹಿಂದೂ ಜೋಡಿಗಳನ್ನು ಒಳಗೊಂಡಂತೆ 15 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಬೆಂಗಳೂರಿನ ಶ್ರೀ ವಿನಯ ಗುರೂಜಿ ಮಾತನಾಡಿ, “ನಾನು ಈ ಸಾಮೂಹಿಕ ವಿವಾಹದಲ್ಲಿ ಗುರೂಜಿಯಾಗಿ ಭಾಗವಹಿಸಿಲ್ಲ, ಆದರೆ ಒಂದು ಸಂಘಟನೆಯು ಸಾಮರಸ್ಯದ ಸಾಮೂಹಿಕ ವಿವಾಹವನ್ನು ಪ್ರಾರಂಭಿಸುತ್ತಿರುವುದರಿಂದ ಇಲ್ಲಿಗೆ ಬಂದಿದ್ದೇನೆ. ಧರ್ಮ, ಜಾತಿ, ಪಂಥಗಳನ್ನು ಬದಿಗಿಟ್ಟು ಉತ್ತಮ ಮನುಷ್ಯರಾಗಬೇಕು. ನೀರು, ಗಾಳಿ ಮತ್ತು ಆಹಾರವು ಜಾತಿ, ಧರ್ಮ ಮತ್ತು ಪಂಥದ ಆಧಾರದ ಮೇಲೆ ಬೇಧವಿಲ್ಲದಿರುವಾಗ ನಾವೇಕೆ ಅದನ್ನು ಮಾಡಬೇಕು?

ಗುರುಪುರದ ಅವರ್ ಲೇಡಿ ಆಫ್ ಪೊಂಪೈ ಚರ್ಚ್‌ನ ಧರ್ಮಗುರು ಫಾದರ್ ಆ್ಯಂಟನಿ ಲೋಬೊ, ಎಜೆ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್‌ನ ಚೇರ್ಮನ್ ಡಾ.ಎ.ಜೆ.ಶೆಟ್ಟಿ, ಹಮೀದ್ ಶಾ ಕಾಂಪ್ಲೆಕ್ಸ್ ಅಧ್ಯಕ್ಷ ಜಿ.ಎ.ಬಾವಾ, ಬ್ಯಾರಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎಸ್.ಎಂ.ರಶೀದ್, ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಿಥುನ್ ರೈ, ಬಾಲಕೃಷ್ಣ. ಬಿ ಶೆಟ್ಟಿ ಅಳಿಕೆಗುತ್ತು, ವೈಟ್ ಸ್ಟೋನ್ ಡೆವಲಪರ್ಸ್ ನ ಆಡಳಿತ ನಿರ್ದೇಶಕ ಬಿ.ಎಂ.ಶರೀಫ್, ಖತೀಬ್ ನ್ಯೂ ಜುಮ್ಮಾ ಮಸೀದಿ ಜೋಕಟ್ಟೆ ಮೌಲಾನಾ ಅಬ್ದುಲ್ ರಹಿಮಾನ್ ಧಾರಿಮಿ, ಖತೀಬ್ ಹಳೆ ಜುಮ್ಮಾ ಮಸೀದಿ ಮೌಲಾನಾ ಯಾಕೋಬ್ ಮದನಿ, ಖತೀಬ್ ಈದ್ಗಾ ಮಸೀದಿ ಜೋಕಟ್ಟೆ ಮೌಲಾನಾ ಇಬಾರಹಿಂ, ನೂತನ ಅಧ್ಯಕ್ಷ ಎಸ್. ಇತರರು ಉಪಸ್ಥಿತರಿದ್ದರು.

ಜರಾ ಚಾರಿಟೇಬಲ್ ಫೌಂಡೇಶನ್ ಮಂಗಳೂರು ಇದರ ಅಧ್ಯಕ್ಷ ಬಿ ಜಕ್ರಿಯಾ ಜೋಕಟ್ಟೆ ಸ್ವಾಗತಿಸಿದರು. ಟ್ರಸ್ಟಿಗಳಾದ ಜಹೀರ್ ಜಕ್ರಿಯಾ, ನಜೀರ್ ಜಕ್ರಿಯಾ ಮತ್ತು ಜಾಹಿದ್ ಜಕ್ರಿಯಾ ಉಪಸ್ಥಿತರಿದ್ದರು.

- Advertisement -

Latest News

error: Content is protected !!