Friday, June 5, 2026
HomeUncategorizedಕಡಬ: ಪೂಜೆ ಮಾಡಿಸುವ ನೆಪದಲ್ಲಿ ಹಣ ಸುಲಿಗೆ ಮಾಡಿದ ಬುಡಬುಡಿಕೆಯವರು; ಹಣ ವಸೂಲಿ ಮಾಡಿಕೊಟ್ಟ ಪೊಲೀಸರು

ಕಡಬ: ಪೂಜೆ ಮಾಡಿಸುವ ನೆಪದಲ್ಲಿ ಹಣ ಸುಲಿಗೆ ಮಾಡಿದ ಬುಡಬುಡಿಕೆಯವರು; ಹಣ ವಸೂಲಿ ಮಾಡಿಕೊಟ್ಟ ಪೊಲೀಸರು

- Advertisement -
- Advertisement -

ಕಡಬ: ಮನೆಯ ಮುಂದೆ ಭವಿಷ್ಯ ಹೇಳಲು ಬಂದ ಬುಡುಬುಡಿಕೆಯವರ ಬಳಿ ಮಹಿಳೆಯು ತನ್ನ ಮನೆಯ ಕೌಟುಂಬಿಕ ಕಲಹಗಳನ್ನು ಹೇಳಿಕೊಂಡು ವಂಚನೆಗೆ ಒಳಗಾದ ಘಟನೆ ಕಡಬ ತಾಲೂಕಿನ ಕಾಣಿಯೂರು ಸಮೀಪದ ಪುಣ್ಚತ್ತಾರು ಎಂಬಲ್ಲಿ ನಡೆದಿದೆ.


ಬುಡುಬುಡಿಕೆ ಅವರ ಬಳಿ ಮಹಿಳೆಯು ತನ್ನ ಮನೆಯಲ್ಲಿ ನಡೆಯುತ್ತಿರುವ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದಾಳೆ, ಇದೇ ನೆಪದಲ್ಲಿ ಸಮಸ್ಯೆ ಪರಿಹಾರಕ್ಕಾಗಿ ಪೂಜೆ ಮಾಡಿಸಲೆಂದು ಹದಿನೈದು ಸಾವಿರಕ್ಕೂ ಹೆಚ್ಚಿನ ಹಣವನ್ನು ಶಿವಮೊಗ್ಗ ಮೂಲದ ಬುಡುಬುಡುಕೆಯ ಇಬ್ಬರು ಮಹಿಳೆಯರು ಪಡೆದಿದ್ದಾರೆ .


ಈ ಬಗ್ಗೆ ಆ ಮಹಿಳೆ ಬುಡಬುಡಿಕೆಯವರಲ್ಲಿ ವಿಚಾರಿಸಿದಾಗ ಹಾಸನದಲ್ಲಿ ಇನ್ನೊಂದು ಪೂಜೆ ಮಾಡಲಿದೆ ಎಂದು ಹೇಳಿ ಅವರು ಇನ್ನಷ್ಟು ಹಣಕ್ಕೆ ಬೇಡಿಕೆಯಿಟ್ಟಿದ್ದಾರ. ಈ ವೇಳೆ ಅಲರ್ಟ್ ಆದ ಮಹಿಳೆ ಇದೊಂದು ಮೋಸ ಮಾಡುವ ತಂತ್ರ ಎಂದು ಪುತ್ತೂರು ಮಹಿಳಾ ಪೊಲೀಸರ ಗಮನಕ್ಕೆ ತಂದಿದ್ದಾರೆ.


ವಿಚಾರಣೆ ನಡೆಸಿದ ಮಹಿಳಾ ಪೊಲೀಸರು ನಕಲಿ ಬುಡುಬುಡುಕೆಯವರನ್ನು ವಶಕ್ಕೆಪಡೆದು ಅವರಿಗೆ ಬಿಸಿ ಮುಟ್ಟಿಸಿದರಲ್ಲದೆ, ಮಹಿಳೆಯಿಂದ ಪಡೆದುಕೊಂಡಿದ್ದ ಹಣವನ್ನು ವಸೂಲಿ ಮಾಡಿ ಮಹಿಳೆಗೆ ಕೊಡಿಸಿದ್ದಾರೆ ಎಂದು ವರದಿಯಾಗಿದೆ.

- Advertisement -

Latest News

error: Content is protected !!