Sunday, June 7, 2026
Homeಕರಾವಳಿಉಡುಪಿವಿಷಜಂತು ಕಡಿದು, ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ನಿಧನ!..

ವಿಷಜಂತು ಕಡಿದು, ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ನಿಧನ!..

- Advertisement -
- Advertisement -

ಕಾರ್ಕಳ: ಇಲ್ಲಿನ ಕುಕ್ಕುಂದೂರು ಗ್ರಾಮದ ದುರ್ಗಾಪರಮೇಶ್ವರಿ ದೇವಸ್ಥಾನ ರಸ್ತೆಯಲ್ಲಿನ ಮಹಿಳೆಯೊಬ್ಬರಿಗೆ ವಿಷದ ಜಂತು ಕಚ್ಚಿದ ಪರಿಣಾಮ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಕುಕ್ಕುಂದೂರು ಬಾಡಿಗೆಮನೆ ನಿವಾಸಿ ಮಲ್ಲಿಕಾ(34) ಎಂದು ಗುರುತಿಸಲಾಗಿದೆ.

ಮಳೆ ಬಂದ ಕಾರಣ ಮನೆಯ ಹಿಂಬದಿಯಲ್ಲಿ ಒಣಗಲು ಹಾಕಿದ್ದ ಬಟ್ಟೆಯನ್ನು ತರಲು ಹೋದಾಗ ಅಲ್ಲಿ ಅವರ ಎಡಕಾಲಿಗೆ ವಿಷದ ಜಂತು ಕಚ್ಚಿತ್ತೆನ್ನಲಾಗಿದೆ. ಕೂಡಲೇ ಕಾರ್ಕಳ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.ಇವರು ಪತಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!