Wednesday, June 24, 2026
Homeಉತ್ತರ ಕನ್ನಡಪೋಷಕರು ಮೊಬೈಲ್ ನೋಡಬೇಡ ಅಂದಿದ್ದಕ್ಕೆ ನೇಣಿಗೆ ಶರಣಾದ ಯುವತಿ

ಪೋಷಕರು ಮೊಬೈಲ್ ನೋಡಬೇಡ ಅಂದಿದ್ದಕ್ಕೆ ನೇಣಿಗೆ ಶರಣಾದ ಯುವತಿ

- Advertisement -
- Advertisement -

ಕಾರವಾರ: ಮೊಬೈಲ್ ಹೆಚ್ಚು ಬಳಸದಂತೆ ಪೋಷಕರು ಬುದ್ದಿವಾದ ಹೇಳಿದ್ದಕ್ಕೆ ನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಹಬ್ಬುವಾಡದಲ್ಲಿ ನಡೆದಿದೆ.


ಮೇಘ (20) ಆತ್ಮಹತ್ಯೆಗೆ ಶರಣಾದ ಯುವತಿಯಾಗಿದ್ದು, ಮೃತ ಯುವತಿಯ ಕುಟಂಬ ಮೂಲತಃ ಸಿದ್ದಾಪುರ ತಾಲ್ಲೂಕಿನವರು. ಕಾರವಾರದ ಹುಬ್ಬುವಾಡದಲ್ಲಿ ಬಾಡಿಗೆ ಮನೆಯಲ್ಲಿ ಕುಟುಂಬಸ್ಥರು ವಾಸವಾಗಿದ್ದರು. ಮೇಗ ಪ್ಯಾರಾಮೆಡಿಕಲ್ ಕೋರ್ಸ್ ಮುಗಿಸಿಕೊಂಡಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ.


ಘಟನೆ ಕುರಿತಂತೆ ಕಾರವಾರ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!