Sunday, June 7, 2026
Homeಕರಾವಳಿಉಡುಪಿಉಡುಪಿ; ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಚಿನ್ನದ ಸರ ಕಳವು

ಉಡುಪಿ; ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಚಿನ್ನದ ಸರ ಕಳವು

- Advertisement -
- Advertisement -

ಉಡುಪಿ; ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಚಿನ್ನದ ಸರ ಕಳವು ಮಾಡಿರುವ ಬ್ರಹ್ಮಾವರದಲ್ಲಿ‌ ನಡೆದಿದೆ.

ಚಾಂತಾರು ಗ್ರಾಮದ ವಿದ್ಯಾನಗರ ನಿವಾಸಿ ಶೀನ ನಾಯ್ಕ ಎಂಬವರ ಪತ್ನಿ ರುಕ್ಮಿಣಿ ಬಾಯಿ(67) ಎಂಬವರು ವೇಗದೂತ ಬಸ್ಸಿನಲ್ಲಿ ಹೊಸೂರು ಗ್ರಾಮದ ಕರ್ಜೆಗೆ ಪ್ರಯಾಣಿಸುತ್ತಿದ್ದಾಗ‌ ಕಳ್ಳರು, ರುಕ್ಮಿಣಿ ಬಾಯಿ ಅವರ ಕುತ್ತಿಗೆ ಯಲ್ಲಿದ್ದ ಸುಮಾರು 32 ಗ್ರಾಂನ ಚಿನ್ನದ ಸರವನ್ನು ಕಳವು ಮಾಡಿ ಪರಾರಿಯಾಗಿದ್ದಾರೆಂದು ಎನ್ನಲಾಗಿದೆ.

ಕಳವಾದ ಚಿನ್ನದ ಸರದ ಮೌಲ್ಯ 1,68,932 ರೂ. ಎಂದು ಅಂದಾಜಿಸಲಾಗಿದೆ.ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!