Thursday, June 4, 2026
Homeಕರಾವಳಿಮಂಗಳೂರು; ಬೆಂಗಳೂರು ಮೂಲದ ಬಾಲಕಿ ನಾಪತ್ತೆ ಪ್ರಕರಣ ಸುಖಾಂತ್ಯ

ಮಂಗಳೂರು; ಬೆಂಗಳೂರು ಮೂಲದ ಬಾಲಕಿ ನಾಪತ್ತೆ ಪ್ರಕರಣ ಸುಖಾಂತ್ಯ

- Advertisement -
- Advertisement -

ಮಂಗಳೂರು: ಬೆಂಗಳೂರಿನಿಂದ ಮಂಗಳೂರಿಗೆ ಬಂದು ನಾಪತ್ತೆಯಾಗಿದ್ದ  ಬಾಲಕಿ ಕೊನೆಗೂ ಪತ್ತೆಯಾಗಿದ್ದಾಳೆ.

ಗೋವಾದ ಪಣಜಿಯಲ್ಲಿ ಭಾರ್ಗವಿ ಪತ್ತೆಯಾಗಿದ್ದು, ಈ ಕುರಿತು ಮಾಹಿತಿಯನ್ನು ಭಾರ್ಗವಿ ಕುಟುಂಬದ ಸದಸ್ಯರು ಧೃಡಪಡಿಸಿದ್ದಾರೆ.

ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನ ಭಾರ್ಗವಿ ಸೋಮವಾರ ಬೆಂಗಳೂರಿನಿಂದ ನಾಪತ್ತೆಯಾಗಿ ಬಸ್‌ ಮೂಲಕ ಮುಂಜಾನೆ 3 ಗಂಟೆಗೆ ಮಂಗಳೂರಿನ ಕೆಎಸ್ಸಾರ್ಟಿಸಿ ಬಸ್‌ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ರಿಕ್ಷಾವೊಂದನ್ನು ಬಾಡಿಗೆಗೆ ಗೊತ್ತುಪಡಿಸಿ ಮುಕ್ಕ ಬೀಚ್‌, ಕದ್ರಿ ಪಾರ್ಕ್‌ ತಿರುಗಿದ್ದಳು. ಅಲ್ಲಿಂದ ರಿಕ್ಷಾದಲ್ಲಿ ಕೆಎಸ್ಸಾರ್ಟಿಸಿ ಬಸ್‌ನಿಲ್ದಾಣಕ್ಕೆ ಬಂದು ಚಿಕ್ಕಮ್ಮನ ಮನೆಗೆ ಹೋಗುವುದಾಗಿ ರಿಕ್ಷಾ ಚಾಲಕನಲ್ಲಿ ಹೇಳಿರುವ ಮಾಹಿತಿ ಲಭ್ಯವಾಗಿತ್ತು.

ಕರ್ನಾಟಕ ಪೊಲೀಸ್, ನೆರೆ ರಾಜ್ಯದ ಪೊಲೀಸರೊಂದಿಗೆ ಸತತ ಸಂಪರ್ಕದಲ್ಲಿದ್ದು ಕೊನೆಗೂ ಭಾರ್ಗವಿ ಗೋವಾದಲ್ಲಿ ಪತ್ತೆಯಾಗಿ ಸುಖಾಂತ್ಯ ಕಂಡಿದೆ.

- Advertisement -

Latest News

error: Content is protected !!