Saturday, June 6, 2026
Homeತಾಜಾ ಸುದ್ದಿಕೆ.ಕಲ್ಯಾಣ್ ಕುಟುಂಬದಲ್ಲಿ ಬಿರುಕು ಉಂಟಾಗಲು ಕಾರಣವಾಗಿದ್ದ ಗಂಗಾ ಕುಲಕರ್ಣಿ ಆತ್ಮಹತ್ಯೆ-ಕೋರ್ಟ್ ನಲ್ಲಿಯೇ ವಿಷ ಸೇವಿಸಿ...

ಕೆ.ಕಲ್ಯಾಣ್ ಕುಟುಂಬದಲ್ಲಿ ಬಿರುಕು ಉಂಟಾಗಲು ಕಾರಣವಾಗಿದ್ದ ಗಂಗಾ ಕುಲಕರ್ಣಿ ಆತ್ಮಹತ್ಯೆ-ಕೋರ್ಟ್ ನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಮಹಿಳೆ!…

- Advertisement -
- Advertisement -

ಕುಷ್ಠಗಿ :ಇಲ್ಲಿನ ನ್ಯಾಯಾಲಯದಲ್ಲಿ ಆತ್ಮಹತ್ಯೆ ಪ್ರಕರಣ ನಡೆದಿದ್ದು, ಕೆ.ಕಲ್ಯಾಣ್ ಅವರ ಪತ್ನಿಯನ್ನು ತಲೆ ಕೆಡಿಸಿ ದಂಪತಿಗಳ ಬಾಳಿನಲ್ಲಿ ಬಿರುಕು ಉಂಟಾಗಲು ಕಾರಣವಾಗಿದ್ದಂತ ಗಂಗಾ ಕುಲಕರ್ಣಿ ಕೋರ್ಟ್ ನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗಂಗಾ ಕುಲಕರ್ಣಿ ಕೆ ಕಲ್ಯಾಣ್ ಅವರ ಪತ್ನಿಯಿಂದ ಆಸ್ತಿ ಲಪಟಾಯಿಸಿದ್ದರು. ಅಲ್ಲದೇ ಯುವಕನೊಬ್ಬನಿಗೂ 3 ಲಕ್ಷ ರೂಪಾಯಿ ವಂಚಿಸಿದ್ದರು.

ಕಲ್ಯಾಣ್ ಪತ್ನಿ ಪ್ರಕರಣದಲ್ಲಿ ಇಂದು ಕುಷ್ಠಗಿ ನ್ಯಾಯಾಲಯಕ್ಕೆ ಗಂಗಾ ಕುಲರ್ಣಿ ಹಾಜರಾದರು. ಈ ವೇಳೆ ಕೋರ್ಟ್ ಆವರಣದಲ್ಲಿಯೇ ಗಂಗಾ ಕುಲಕರ್ಣಿ ವಿಷ ಕುಡಿದಿದ್ದಾರೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ರೂ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

- Advertisement -

Latest News

error: Content is protected !!