ಉಡುಪಿ: ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪದಲ್ಲಿ ಮರಕ್ಕೆ ಕಟ್ಟಿ ಹಲ್ಲೆ ನಡೆಸಿರುವ ಪ್ರಕರಣದ ಸಂತ್ರಸ್ತೆ ಹಾಗೂ ಅವರ ಸಮುದಾಯದ ಸದಸ್ಯರು ದೌರ್ಜನ್ಯ ಪ್ರಕರಣವನ್ನು ರದ್ದುಗೊಳಿಸುವಂತೆ ಇಂದು ಮಣಿಪಾಲದ ಡಿಸಿ ಕಚೇರಿಯಲ್ಲಿ ಒತ್ತಾಯಿಸಿ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಅವರಿಗೆ ಮನವಿ ಸಲ್ಲಿಸಿದರು.
ಸಂತ್ರಸ್ತೆ ಲಕ್ಕಿಬಾಯಿ ಪ್ರಕರಣದ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿ, ‘ಹಲ್ಲೆ ಪ್ರಕಣವನ್ನು ನಾವು ಈಗಾಗಲೇ ಶಾಂತಿಯುತವಾಗಿ ಬಗೆಹರಿಸಿಕೊಂಡಿದ್ದು, ಅವರು ಕೂಡ ನನ್ನನ್ನು ಕರೆದು ಮರುದಿನ ವಿಚಾರದ ಕುರಿತು ಮಾತನಾಡಿದರು. ಆದರೆ ಆ ಸಂದರ್ಭದಲ್ಲಿ ನನಗೆ ಅಲ್ಲಿ ಹೋಗಲಾಗದ ಕಾರಣ ಅವರೇ ನನ್ನನ್ನು ಆಟೋರಿಕ್ಷಾದಲ್ಲಿ ಬಂದು ಕರೆದುಕೊಂಡು ಹೋದರು. ನನಗೆ ವಿದ್ಯೆಯಿಲ್ಲದ ಕಾರಣ, ಪತ್ರಕ್ಕೆ ನನ್ನ ಹೆಬ್ಬೆರಳಿನ ಗುರುತು ಹಾಕಲು ಕೇಳಿದರು, ನಾನು ಹಾಕಿದೆ. ಅದರ ನಂತರ, ಏನಾಯಿತು ಎಂಬ ಮಾಹಿತಿ ನನಗಿಲ್ಲ,” ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಯಶ್‌ಪಾಲ್ ಸುವರ್ಣ ಮತ್ತು ಮಲ್ಪೆ ಬಂದರಿನಲ್ಲಿ ಕೆಲಸ ಮಾಡುವ ಬಂಜಾರ ಸಮುದಾಯದ ಸದಸ್ಯರು ಉಪಸ್ಥಿತರಿದ್ದರು.