Monday, June 8, 2026
Homeಕರಾವಳಿಸುಳ್ಯ; ಅರಂತೋಡಿನಲ್ಲಿ ಕೆಎಸ್ ಆರ್ ಟಿಸಿ ಬಸ್ ಗಳ ಮಧ್ಯೆ ಅಪಘಾತ; ಓರ್ವ ಮಹಿಳೆ ಸಾವು,...

ಸುಳ್ಯ; ಅರಂತೋಡಿನಲ್ಲಿ ಕೆಎಸ್ ಆರ್ ಟಿಸಿ ಬಸ್ ಗಳ ಮಧ್ಯೆ ಅಪಘಾತ; ಓರ್ವ ಮಹಿಳೆ ಸಾವು, ಇಬ್ಬರು ಪ್ರಯಾಣಿಕರಿಗೆ ಗಾಯ

- Advertisement -
- Advertisement -

ಸುಳ್ಯ; ಅರಂತೋಡಿನಲ್ಲಿ ಕೆಎಸ್ ಆರ್ ಟಿಸಿ ಬಸ್ ಗಳ ಮಧ್ಯೆ ಅಪಘಾತ ಸಂಭವಿಸಿ, ಓರ್ವ ಮಹಿಳೆ ಸಾವನ್ನರಪ್ಪಿದ್ದು, ಇಬ್ಬರು ಪ್ರಯಾಣಿಕರಿಗೆ ಗಾಯಗಳಾಗಿವೆ.

ಅರಂತೋಡು ಗ್ರಾಮದ ಕೋಡಂಕೇರಿ ಎಂಬಲ್ಲಿ, ಸುಳ್ಯದಿಂದ  ಮಡಿಕೇರಿ ಕಡೆಗೆ ಹೋಗುತ್ತಿದ್ದ KA 21 F 0069 ನೋಂದಣಿ ಸಂಖ್ಯೆಯ ಕೆ.ಎಸ್.ಆರ್.ಟಿ.ಸಿ  ಬಸ್ ಗೆ, ಮಡಿಕೇರಿ ಕಡೆಯಿಂದ  – ಸುಳ್ಯ ಮಾರ್ಗವಾಗಿ ಬರುತ್ತಿದ್ದ KA 19 F 3620 ನೊಂದಣಿ ಸಂಖ್ಯೆಯ ಕೆ.ಎಸ್.ಆರ್.ಟಿ.ಸಿ  ಬಸ್ ಗಳ ಮಧ್ಯೆ ಚಾಲಕನ ನಿರ್ಲಕ್ಷ್ಯತನದ ಚಾಲನೆಯಿಂದ  ಅಪಘಾತವಾಗಿದೆ. ಅಪಘಾತದಲ್ಲಿ ಮಡಿಕೇರಿ ಕುಶಾಲನಗರ ಮೂಲದ ಭಾರತಿ (50) ಸಾವನ್ನಪ್ಪಿದ್ದಾರೆ. ಇಬ್ಬರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿರುತ್ತದೆ. ಪ್ರಯಾಣಿಕರ ಪೈಕಿ 17 ಜನರಿಗೆ ಸಾಮಾನ್ಯ ಗಾಯಗಳಾಗಿದ್ದು, ಎಲ್ಲಾ ಗಾಯಾಳುಗಳನ್ನು ಚಿಕಿತ್ಸೆಗಾಗಿ ಬೇರೆ ಬೇರೆ ಆಸ್ಪತ್ರೆಗಳಿಗೆ ದಾಖಲಿಸಲಾಗಿರುತ್ತದೆ. ಘಟನಾ ಸ್ಥಳಕ್ಕೆ ಸುಳ್ಯ ವೃತ್ತ ನಿರೀಕ್ಷಕರು ಹಾಗೂ ಉಪನಿರೀಕ್ಷಕರು ಭೇಟಿ ನೀಡಿದ್ದು, ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನುಕ್ರಮ ಕೈಗೊಳ್ಳಲಾಗುವುದು. ಅಪಘಾತಕ್ಕೀಡಾದ ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿದರು.

- Advertisement -

Latest News

error: Content is protected !!