Thursday, June 25, 2026
Homeತಾಜಾ ಸುದ್ದಿರಶ್ಮಿಕಾ ಅವರ ತಂದೆಗೂ ಇಲ್ಲದ ಸಮಸ್ಯೆ ನಿಮಗ್ಯಾಕೆ; ಟ್ರೋಲಿಗರಿಗೆ ಖಡಕ್ ಉತ್ತರ ಕೊಟ್ಟ ಸಲ್ಮಾನ್ ಖಾನ್

ರಶ್ಮಿಕಾ ಅವರ ತಂದೆಗೂ ಇಲ್ಲದ ಸಮಸ್ಯೆ ನಿಮಗ್ಯಾಕೆ; ಟ್ರೋಲಿಗರಿಗೆ ಖಡಕ್ ಉತ್ತರ ಕೊಟ್ಟ ಸಲ್ಮಾನ್ ಖಾನ್

- Advertisement -
- Advertisement -

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರು ಸಲ್ಮಾನ್ ಖಾನ್ ಅವರೊಂದಿಗೆ ‘ಸಿಕಂದರ್’ ಚಿತ್ರ ಮಾಡುತ್ತಿದ್ದು, ಈ ಸಿನಿಮಾ ಮಾ.30ರಂದು ರಿಲೀಸ್‌ಗೆ ರೆಡಿಯಿದೆ.

ಈ ಚಿತ್ರದ ಟ್ರೈಲರ್ ರಿಲೀಸ್ ಮುಂಬೈನಲ್ಲಿ ಅದ್ಧೂರಿಯಾಗಿ ನಡೆಯಿತು. ಈ ವೇಳೆಯಲ್ಲಿ ಸಲ್ಮಾನ್‌ ಖಾನ್ ಗೆ ರಶ್ಮಿಕಾ 31 ವರ್ಷ ನಿಮ್ಮಕ್ಕಿಂತ ಚಿಕ್ಕವರಾಗಿದ್ದು ನೀವು ಅವರೊಂದಿಗೆ ಹೇಗೆ ನಟಿಸುತ್ತೀರಾ ಎನ್ನುವ ಪ್ರಶ್ನೆ ಎದುರಾಗಿದ್ದು, ಈ ಸಂದರ್ಭದಲ್ಲಿ ಸಲ್ಮಾನ್ ಖಾನ್ ಆಗ ‘ಹೀರೋಯಿನ್‌ಗೆ ಯಾವುದೇ ಸಮಸ್ಯೆ ಇಲ್ಲ. ಅವರ ತಂದೆಗೂ ಕೂಡ ಯಾವುದೇ ಸಮಸ್ಯೆ ಇಲ್ಲ, ಹೀಗಿರುವಾಗ ನಿಮ್ಮದೇನು? ನಿಮಗ್ಯಾಕೆ? ಇದು ಸಮಸ್ಯೆಯಂತೆ ಕಾಣುತ್ತಿದೆ,’ ಎಂದು ಖಡಕ್ ಆಗಿ ಉತ್ತರ ನೀಡಿದ್ದಾರೆ.  

ಅಷ್ಟೇಅಲ್ಲದೆ ಮುಂದಿನ ದಿನಗಳಲ್ಲಿ ರಶ್ಮಿಕಾ ವೈವಾಹಿಕ ಜೀವನಕ್ಕೆ ಕಾಲಿಟ್ಟು, ಮಕ್ಕಳನ್ನು ಮಾಡಿಕೊಂಡರೂ, ಅವರಿಗೆ ಚಿತ್ರರಂಗದಲ್ಲಿ ಕೆಲಸ ಮಾಡಲು ಅವರ ಪತಿಯಿಂದ ಅನುಮತಿ ಸಿಗುತ್ತದೆ ಎಂಬುವುದು ನನ್ನ ಭಾವನೆ. ಆಗಲೂ ಅವರೊಂದಿಗೆ ನಟಿಸುವ ಸಂದರ್ಭ ಎದುರಾದರೆ, ಖಂಡಿತವಾಗಿಯೂ ಅವರೊಂದಿಗೆ ಸಿನಿಮಾ ಮಾಡುತ್ತೇನೆ ಎಂದು ಟ್ರೋಲಿಗರಿಗೆ ನಟ ತಿರುಗೇಟು ನೀಡಿದ್ದಾರೆ. ಇತ್ತ ಸಲ್ಮಾನ್ ಖಾನ್ ಅವರ ಈ ಮಾತಿಗೆ ಹೌದು ಎಂದು ರಶ್ಮಿಕಾ ಹಿಂದೆ ನಿಂತು ತಲೆಯಾಡಿಸಿದ್ದಾರೆ.

‘ಸಿಕಂದರ್’ ಸಿನಿಮಾಗೆ ‘ಪುಷ್ಪ 2’ ನಟಿ ನಾಯಕಿ ಎನ್ನುತ್ತಿದ್ದಂತೆ ಸಲ್ಮಾನ್ ಮತ್ತು ರಶ್ಮಿಕಾ ವಯಸ್ಸಿನ ಬಗ್ಗೆ ಚರ್ಚೆ ನಡೆದಿದ್ದು, ಈ ಸಂದಭದಲ್ಲಿ ಸಲ್ಮಾನ್ ಟೀಕೆಗೆ ಗುರಿಯಾಗಿದ್ದರು.

- Advertisement -

Latest News

error: Content is protected !!