Friday, June 5, 2026
Homeಮನರಂಜನೆಚಿಕ್ಕಣ್ಣನ ಜೊತೆ ಡಿ ಬಾಸ್ ದರ್ಶನ್ ಹೋಗಿದ್ದೆಲ್ಲಿಗೆ ಗೊತ್ತಾ?

ಚಿಕ್ಕಣ್ಣನ ಜೊತೆ ಡಿ ಬಾಸ್ ದರ್ಶನ್ ಹೋಗಿದ್ದೆಲ್ಲಿಗೆ ಗೊತ್ತಾ?

- Advertisement -
- Advertisement -

ಚಾಮರಾಜನಗರ : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಪ್ರಾಣಿ, ಪಕ್ಷಿಗಳೆಂದರೇ ಅಚ್ಚುಮೆಚ್ಚು ಅನ್ನೋದು ಗೊತ್ತಿರುವ ವಿಚಾರವೇ. ಸದಾ ಸಮಯ ಸಿಕ್ಕಾಗಲೆಲ್ಲಾ ಕಾಡು, ಪ್ರಾಣಿಗಳ ಜೊತೆಯೇ ಇರುವ ನಟ ದರ್ಶನ್ ಇದೀಗ ಚಾಮರಾಜನಗರದ ಮಲೆಮಹದೇಶ್ವರ ಅರಣ್ಯದಲ್ಲಿ ಸುತ್ತಾಡಿದ್ದಾರೆ. ಕೊರೊನಾ ಕಾರಣದಿಂದ ಸಿನಿಮಾ ಶೂಟಿಂಗ್‌ನಿಂದ ದೂರ ಉಳಿದಿರುವ ದರ್ಶನ್ ಇದೀಗ ಕಾಡು ಸುತ್ತಾಟ ನಡೆಸಿದ್ದಾರೆ.

ಹೌದು, ಮಲೆಮಹದೇಶ್ವರ ವನ್ಯಧಾಮದ ದೊಡ್ಡಮಾಕಳಗಿ ವ್ಯಾಪ್ತಿಯ ಅರಣ್ಯದಲ್ಲಿ ಸಂಚಾರ ಮಾಡಿದ್ದಾರೆ. ಇವರಿಗೆ ನಟ ಚಿಕ್ಕಣ್ಣ ಕೂಡ ಸಾಥ್ ನೀಡಿದ್ದಾರೆ. ಇದೇ ವೇಳೆ ವನ್ಯಧಾಮದ ಡಿಎಫ್‌ಒ ಕಚೇರಿ ಸಮೀಪ ಎರಡು ಗಿಡವನ್ನೂ ನೆಟ್ಟಿದ್ದಾರೆ. ಅಷ್ಟೆ ಅಲ್ಲದೆ ಎಪಿಸಿ ಶಿಬಿರಕ್ಕೆ ಭೇಟಿ ನೀಡಿ ವಾಚರ್‌ ಗಳೊಂದಿಗೆ ಸಂವಾದ ನಡೆಸಿದ್ದಾರೆ. ಕೊಳ್ಳೇಗಾಲದ ಬಫರ್ ವಲಯದಲ್ಲಿ ದೊಡ್ಡಮಾಕಳಗಿ ಅರಣ್ಯ ಪ್ರದೇಶ ಬರುತ್ತದೆ.

ಸದ್ಯ ಇವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ದರ್ಶನ್ ಜೊತೆ ಚಿಕ್ಕಣ್ಣ ಕೂಡ ಕಾಡು ಸುತ್ತಾಟ ಮಾಡಿರುವುದು ವಿಶೇಷ ಎನಿಸಿದೆ. ಈ ಹಿಂದೆಯೂ ದರ್ಶನ್ ಅನೇಕ ಬಾರಿ ಕಾಡಿಗೆ ಹೋಗಿದ್ದಾರೆ.

#Yesterday_Exclusive_Picsಚಾಲೆಂಜಿಂಗ್ ಸ್ಟಾರ್​ ದರ್ಶನ್​​ ಬಾಸ್ ಹಾಗೂ ಹಾಸ್ಯನಟ ಚಿಕ್ಕಣ್ಣ ನಿನ್ನೆ ಜೊತೆಯಾಗಿ ಕಾಡು ಸುತ್ತಾಟ…

Posted by All India Challenging Star Darshan Fans on Sunday, 26 July 2020

- Advertisement -

Latest News

error: Content is protected !!