Sunday, June 7, 2026
Homeಕರಾವಳಿಉಡುಪಿರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಶಾಸಕ ಲಾಲಾಜಿ ಮೆಂಡನ್ ನೇಮಕ

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಶಾಸಕ ಲಾಲಾಜಿ ಮೆಂಡನ್ ನೇಮಕ

- Advertisement -
- Advertisement -

ಉಡುಪಿ: ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಲಾಲಾಜಿ ಮೆಂಡನ್ ರ ಹೆಗಲ ಮೆಲೆಗೆ ಹೊಸದೊಂದು ಜವಾಬ್ದಾರಿ ಸೇರಿಕೊಂಡಿದ್ದು, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ನೇಮಕ ಮಾಡಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆದೇಶ ಹೊರಡಿಸುವಂತೆ ಸೂಚನೆ ನೀಡಿದ್ದಾರೆ.

ಲಾಲಾಜಿ ಮೆಂಡನ್ ಅವರು ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಎರಡನೇ ಬಾರಿ ಶಾಸಕರಾದ ಅವಧಿಯಲ್ಲಿ ಕೊಂಕಣ್ ರೈಲ್ವೇ ಮಂಡಳಿ ನಿರ್ದೇಶಕರಾಗಿದ್ದರು. ಸದ್ಯ ಬಿಎಸ್ ವೈ ಸರಕಾರ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ.

ಇವರೊಂದಿಗೆ ರಾಜ್ಯದ 24 ಶಾಸಕರುಗಳಿಗೆ ನಿಗಮ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆ ಮಾಡಿ ರಾಜ್ಯಸರ್ಕಾರ ಆದೇಶ ಹೊರಡಿಸಿದೆ ದಕ್ಷಿಣ ಕನ್ನಡಜಿಲ್ಲೆಯಲ್ಲಿ 7 ಮಂದಿ ಶಾಸಕರಿದ್ದು ಯಾರೋಬ್ಬರಿಗೂ ನಿಗಮ ಮಂಡಳಿಯನ್ನು ನೀಡದೆ ಇರುವುದು ಕರಾವಳಿಯ ಬಿ.ಜೆ.ಪಿ ಭದ್ರ ಕೋಟೆ ದಕ್ಷಿಣ ಕನ್ನಡಕ್ಕೆ ಭಾರಿ ಮುಖಭಂಗವಾಗಿದೆ.

- Advertisement -

Latest News

error: Content is protected !!