Saturday, May 4, 2024
Homeತಾಜಾ ಸುದ್ದಿಮಾಸ್ಕ್ ಹಾಕದ ಮೇಕೆಗಳಿಗೆ ಪೊಲೀಸರು ಕೊಟ್ಟ ಶಿಕ್ಷೆಯೇನು ಗೊತ್ತಾ?

ಮಾಸ್ಕ್ ಹಾಕದ ಮೇಕೆಗಳಿಗೆ ಪೊಲೀಸರು ಕೊಟ್ಟ ಶಿಕ್ಷೆಯೇನು ಗೊತ್ತಾ?

spot_img
- Advertisement -
- Advertisement -

ಉತ್ತರ ಪ್ರದೇಶ :  ಕೊರೊನಾ ಎಂಬ ಹೆಮ್ಮಾರಿಯಿಂದ ಏನು ಮರೆತು ಬಿಟ್ಟರೂ ಮಾಸ್ಕ್ ಮರೆತು ಬಿಡುವಂತಿಲ್ಲ. ಎಲ್ಲೇ ಹೋದರೂ ಮಾಸ್ಕ್ ಕಡ್ಡಾಯವಾಗಿ ಹಾಕಲೇಬೇಕು ಎಂದು ಸರ್ಕಾರವೇ ಹೇಳಿದೆ. ಹೀಗಾಗಿ ಮಾಸ್ಕ್ ಹಾಕದೇ ಇರುವವರಿಗೆ ದಂಡವನ್ನೂ ವಿಧಿಸಲಾಗುತ್ತಿದೆ. ಇದು ಕೇವಲ ಮನುಷ್ಯರಿಗಷ್ಟೆ ಅನ್ವಯ ಅನ್ನೋದು ಗೊತ್ತಿರುವ ವಿಚಾರವೇ. ಆದರೆ ಉತ್ತರ ಪ್ರದೇಶ ಪೊಲೀಸರಿಗೆ ಇದು ಗೊತ್ತಿಲ್ಲ ಅನ್ನಿಸುತ್ತೆ. ಯಾಕೆ ಅಂತೀರಾ ಮುಂದೆ ನೋಡಿ.

ಬೆಕೋಗಂಜ್ ಪ್ರದೇಶದಲ್ಲಿ ಮೇಕೆಯೊಂದು ರಸ್ತೆಯಲ್ಲಿ ಮೇಯುತ್ತಿತ್ತಂತೆ. ಇದು ಮಾಸ್ಕ್ ಹಾಕಿಲ್ಲ ಎಂದು ಆ ಮೇಕೆಯನ್ನ ಬೆಕೋಗಂಜ್ ಪೊಲೀಸರು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಮೇಕೆಯನ್ನು ಪೊಲೀಸರು ಕರೆದೊಯ್ದಿದ್ದನ್ನು ನೋಡಿದ ಮೇಕೆ ಮಾಲೀಕ ಪೊಲೀಸ್ ಠಾಣೆಗೆ ಹೋಗಿ ಪ್ರಶ್ನೆ ಮಾಡಿದ್ದಾನೆ. ಹಾಗೂ ಬಿಡುಗಡೆ ಮಾಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾನೆ. ನಂತರ ಪೊಲೀಸರು ಮೇಕೆಯನ್ನು ಬಿಡುಗಡೆ ಮಾಡಿದ್ದಾರೆ.

ಯಾಕೆ ಮೇಕೆಯನ್ನು ಬಂಧಿಸಿದ್ದು ಎಂಬ ಪ್ರಶ್ನೆಗೆ ಪೊಲೀಸರು ಮೇಕೆ ಮಾಸ್ಕ್ ಹಾಕಿಲ್ಲ ಎಂದು ನೀಡಿರುವ ಉತ್ತರ ಹಾಸ್ಯಕ್ಕೆ ದಾರಿ ಮಾಡಿಕೊಟ್ಟಿದೆ. ಇದು ಅಪಹಾಸ್ಯ ಆಗುತ್ತಿದ್ದಂತೆ ತಮ್ಮ ನಿಲುವು ಬದಲಾಯಿಸಿಕೊಂಡಿದ್ದಾರೆ ಈ ಪೊಲೀಸರು. ಮಾಸ್ಕ್ ಹಾಕಿಕೊಳ್ಳದ ಯುವಕ ರಸ್ತೆಯಲ್ಲಿ ಹೋಗುತ್ತಿದ್ದ, ಕೇಳಲು ಹೋದಾಗ ಓಡಿ ಹೋದ. ನಂತರ ಆತನ ಮೇಕೆ ಹಿಡಿದುಕೊಂಡರೆ ಠಾಣೆಗೆ ಬರುತ್ತಾನೆ ಎಂಬ ಉದ್ದೇಶದಿಂದ ಪೊಲೀಸರು ಮೇಕೆಯನ್ನು ಠಾಣೆಗೆ ತಂದಿದ್ದರು ಎಂದು ಅಲ್ಲಿನ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

- Advertisement -
spot_img

Latest News

error: Content is protected !!