Thursday, June 25, 2026
Homeತಾಜಾ ಸುದ್ದಿದರ್ಶನ್ ನೋಡೋಕೆ ಸುದೀಪ್ ಬಳ್ಳಾರಿ ಜೈಲಿಗೆ ಹೋಗ್ತಾರಾ? ಕಿಚ್ಚ ಹೇಳಿದ್ದೇನು?

ದರ್ಶನ್ ನೋಡೋಕೆ ಸುದೀಪ್ ಬಳ್ಳಾರಿ ಜೈಲಿಗೆ ಹೋಗ್ತಾರಾ? ಕಿಚ್ಚ ಹೇಳಿದ್ದೇನು?

- Advertisement -
- Advertisement -

ಬೆಂಗಳೂರು : ನಟ ಸುದೀಪ್ ಅವರು ಇಂದು ಸುದ್ದಿಗೋಷ್ಟಿ ನಡೆಸಿದ್ರು. ಈ ವೇಳೆ ತಮ್ಮ ಬರ್ತಡೇ, ಸಿನಿಮಾ, ಹಾಗೂ ದರ್ಶನ್ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಕಿಚ್ಚ ಸುದೀಪ್ ಉತ್ತರಿಸಿದ್ರು.

ಸುದ್ದಿಗೋಷ್ಟಿ ವೇಳೆ ಮಾಧ್ಯಮದವರು ದರ್ಶನ್ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳನ್ನು ಕೇಳಿದ್ರು.ಅದರಂತೆ ದರ್ಶನ್ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್ ದರ್ಶನ್ ಅವರಿಗೆ ಅಂತ ಫ್ಯಾನ್ಸ್ ಇದ್ದಾರೆ, ಕುಟುಂಬ ಇದೆ. ನಾನು ಯಾರಿಗೂ ಕೂಡ ನೋವು ಕೊಡಲು ಬಯಸೋದಿಲ್ಲ. ನಮ್ಮ ದೇಶದಲ್ಲಿ ಕಾನೂನಿದೆ. ಅದರ ಮೇಲೆ ನಂಬಿಕೆ ಇರ್ಬೇಕು. ದರ್ಶನ್ ತಪ್ಪು ಮಾಡಿದ್ದಾರೆ ಅಂತಾ  ನಾನು ಹೆಂಗೆ ಹೇಳೋಕೆ ಆಗುತ್ತೆ ಅಂತಾ ಕಿಚ್ಚ ಮರು ಪ್ರಶ್ನೆ ಹಾಕಿದ್ದಾರೆ.

ಇನ್ನು ದರ್ಶನ್ ಅವರನ್ನು ಭೇಟಿಯಾಗೋದಕ್ಕೆ ಬಳ್ಳಾರಿ ಜೈಲಿಗೆ ಹೋಗ್ತೀರಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಕಿಚ್ಚ ಸುದೀಪ್ ನನ್ನ ಬರ್ತ್ ಡೇ ಗೂ ಮುಂಚೆ ನಾವಿಬ್ಬರೂ ಮಾತಾಡಿಕೊಂಡಿದ್ರೆ, ನಾನು ದರ್ಶನ್ ಅವರನ್ನು ಭೇಟಿ ಮಾಡಲು ಹೋಗುತ್ತಿದ್ದೆ ಅಂತಾ ಅನ್ಸುತ್ತೆ ಅಂತಾ ಕಿಚ್ಚ ಸುದೀಪ್ ಹೇಳಿದ್ದಾರೆ.

- Advertisement -

Latest News

error: Content is protected !!