- Advertisement -
![]()
- Advertisement -
ಉಡುಪಿ: ರಾಜ್ಯದಲ್ಲಿ ಜನಸಂಖ್ಯಾ ಕಾನೂನು ಜಾರಿ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಒತ್ತಾಯ ಮಾಡುವುದಾಗಿ ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ. ಉಡುಪಿಯಲ್ಲಿ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ರಘುಪತಿ ಭಟ್, ಉತ್ತರ ಪ್ರದೇಶದಲ್ಲಿ ಉತ್ತಮ ಕಾನೂನನ್ನು ಮಾಡಿದ್ದಾರೆ. ನಮ್ಮ ರಾಜ್ಯದಲ್ಲೂ ಈ ಕಾನೂನನ್ನು ಜಾರಿಗೆ ತರುವ ಅವಶ್ಯಕತೆ ಇದೆ. ಕಾನೂನು ರೂಪಿಸಲು ರಾಜ್ಯ ಸರಕಾರ ಮುಂದೆ ಬರಬೇಕು. ಜನಸಂಖ್ಯೆ ಅಸಮತೋಲನವಾದರೆ ಆರ್ಥಿಕವಾಗಿ ಹೊಡೆತ ಬೀಳುತ್ತದೆ. ಅಲ್ಲದೇ ಜನಸಂಖ್ಯೆ ವಿಪರೀತ ಏರಿಕೆಯಾದ್ರೆ ದೇಶಕ್ಕೆ ಸಮಸ್ಯೆ. ಭಾರತ ಮಾನವ ಸಂಪತ್ತನ್ನು ಒದಗಿಸುವ ಫ್ಯಾಕ್ಟರಿ. ಎಷ್ಟು ಬೇಕಾದ್ರೂ ಮಕ್ಕಳು ಮಾಡಬಹುದು ಎಂಬ ಮನಸ್ಥಿತಿ ಇದ್ದರೆ ಕಷ್ಟ ಎಂದು ಹೇಳಿದ್ದಾರೆ.

ಮುಂಬರುವ ಆಗಸ್ಟ್ ತಿಂಗಳಿನಲ್ಲಿ ನಡೆಯುವ ವಿಧಾನಸಭೆ ಅಧಿವೇಶನದಲ್ಲಿ ಈ ಬಗ್ಗೆ ಒತ್ತಾಯ ಮಾಡುತ್ತೇನೆ ಎಂದು ಕೂಡಾ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
- Advertisement -


