Monday, July 6, 2026
Homeಕರಾವಳಿಶ್ರೀ ಮಹಾಗಣಪತಿ ದೇವಸ್ಥಾನ ಅಳದಂಗಡಿಯಲ್ಲಿ ಪ್ರತಿ ಮಂಗಳವಾರ ವಿಶೇಷ 'ಗಣಹವನ'

ಶ್ರೀ ಮಹಾಗಣಪತಿ ದೇವಸ್ಥಾನ ಅಳದಂಗಡಿಯಲ್ಲಿ ಪ್ರತಿ ಮಂಗಳವಾರ ವಿಶೇಷ ‘ಗಣಹವನ’

- Advertisement -
- Advertisement -

ಬೆಳ್ತಂಗಡಿ: ಅಳದಂಗಡಿಯ ಅತ್ಯಂತ ಪವಿತ್ರ ಹಾಗೂ ಕಾರಣೀಕ ಕ್ಷೇತ್ರವಾದ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ, ಸಕಲ ವಿಘ್ನನಿವಾರಕ ಹಾಗೂ ಇಷ್ಟಾರ್ಥ ಪ್ರದಾತನಾದ ಶ್ರೀ ಮಹಾಗಣಪತಿಯ ದಿವ್ಯ ಸಾನ್ನಿಧ್ಯದಲ್ಲಿ ಇನ್ಮುಂದೆ ಪ್ರತಿ ಮಂಗಳವಾರ ವಿಶೇಷ ‘ಗಣಹವನ’ ಸೇವೆಯನ್ನು ಆಯೋಜಿಸಲಾಗಿದೆ ಎಂದು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ. ಶಶಿಧರ ಡೋಂಗ್ರೆ ತಿಳಿಸಿದ್ದಾರೆ.

ಈ ವಿಶೇಷ ಸೇವೆಯ ಮೊದಲ ಕಾರ್ಯಕ್ರಮವು ಜುಲೈ 7, 2026ರ ಮಂಗಳವಾರ ಮುಂಜಾನೆ ಪ್ರಾರಂಭವಾಗಲಿದ್ದು, ಬೆಳಿಗ್ಗೆ 10:00 ಗಂಟೆಗೆ ಗಣಹವನದ ಪೂರ್ಣಾಹುತಿ ನೆರವೇರಲಿದೆ. ಈ ಪ್ರಥಮ ಗಣಹವನ ಸೇವೆಯನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ. ಶಶಿಧರ ಡೋಂಗ್ರೆ ಹಾಗೂ ಡಾ. ಸುಷ್ಮಾ ಡೋಂಗ್ರೆ ದಂಪತಿಗಳು ನೆರವೇರಿಸಲಿದ್ದಾರೆ.

ಈ ವಿಶೇಷ ಗಣಹವನ ಸೇವೆಯ ದರವು ರೂ. 3,000/- ಆಗಿದ್ದು, ಸೇವಾರ್ಥಿಗಳು ಕೇವಲ ಹೂವು ಮತ್ತು ಹಣ್ಣುಗಳನ್ನು ತರಬೇಕಾಗಿ ವಿನಂತಿಸಲಾಗಿದೆ. ಹವನಕ್ಕೆ ಬೇಕಾದ ಉಳಿದ ಎಲ್ಲಾ ಪೂಜಾ ಸಾಮಗ್ರಿಗಳು ಹಾಗೂ ಪುರೋಹಿತರ ವ್ಯವಸ್ಥೆಯನ್ನು ದೇವಸ್ಥಾನದ ವತಿಯಿಂದಲೇ ಮಾಡಲಾಗುವುದು. ಆಸಕ್ತ ಭಕ್ತಾದಿಗಳು ಕನಿಷ್ಠ ಒಂದು ವಾರ ಮುಂಚಿತವಾಗಿ ದೇವಸ್ಥಾನದ ಕಚೇರಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗಿ ಕೋರಲಾಗಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಭಕ್ತ ಬಂಧುಗಳು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವ್ಯವಸ್ಥಾಪನಾ ಸಮಿತಿ ಮನವಿ ಮಾಡಿದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ನೋಂದಣಿಗಾಗಿ ಸಮಿತಿಯ ಅಧ್ಯಕ್ಷರಾದ ಡಾ. ಶಶಿಧರ ಡೋಂಗ್ರೆ ಅವರ ಮೊಬೈಲ್ ಸಂಖ್ಯೆ: 9448548668 ಅಥವಾ 7483988272 ಅನ್ನು ಸಂಪರ್ಕಿಸಬಹುದಾಗಿದೆ.

- Advertisement -

Latest News

error: Content is protected !!