Monday, June 8, 2026
HomeUncategorizedಬೆಳ್ತಂಗಡಿ: ಅಗ್ನಿಶಾಮಕ ಠಾಣೆಯ ಇಬ್ಬರು ಅಧಿಕಾರಿಗಳಿಗೆ ಮುಖ್ಯಮಂತ್ರಿ ಚಿನ್ನದ ಪದಕ ಪ್ರಧಾನ!

ಬೆಳ್ತಂಗಡಿ: ಅಗ್ನಿಶಾಮಕ ಠಾಣೆಯ ಇಬ್ಬರು ಅಧಿಕಾರಿಗಳಿಗೆ ಮುಖ್ಯಮಂತ್ರಿ ಚಿನ್ನದ ಪದಕ ಪ್ರಧಾನ!

- Advertisement -
- Advertisement -

ಬೆಳ್ತಂಗಡಿ : ಬೆಳ್ತಂಗಡಿ ಅಗ್ನಿಶಾಮಕ ದಳದ ದಕ್ಷ ಮತ್ತು ಪ್ರಾಮಾಣಿಕ ಠಾಣಾಧಿಕಾರಿ ಎಂ.ಗೋಪಾಲ ಮತ್ತು ಪ್ರಮುಖ ಅಗ್ನಿಶಾಮಕ ಪಿ.ಕೃಷ್ಣ ನಾಯ್ಕ ಅವರಿಗೆ ಮುಖ್ಯಮಂತ್ರಿ ಚಿನ್ನದ ಪದಕ ಸಿಕ್ಕಿದೆ.

ಎಂ.ಗೋಪಾಲ ಅವರು ನರಗುಂದ, ಪಾಂಡ್ವೇಶರ, ಪುತ್ತೂರು ,ಉಡುಪಿ ಭಾಗಗಳಲ್ಲಿ ದಕ್ಷತೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು ನಂತರ ಪದನ್ನೊತ್ತಿ ಹೊಂದಿ ಬೆಳ್ತಂಗಡಿ ಅಗ್ನಿಶಾಮಕ ಠಾಣೆಯಲ್ಲಿ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಪಿ.ಕೃಷ್ಣ ನಾಯ್ಕ ಅವರು ಪಾಂಡೇಶ್ವರ , ಮೂಡಬಿದ್ರೆ ಭಾಗಗಳಲ್ಲಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ ನಂತರ ಪದನ್ನೊತ್ತಿ ಹೊಂದಿ ಬೆಳ್ತಂಗಡಿ ಅಗ್ನಿಶಾಮಕ ಠಾಣೆಯ ಪ್ರಮುಖ ಅಗ್ನಿಶಾಮಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಜುಲೈ 13 ರಂದು ಬೆಂಗಳೂರು ಬಾಂಕ್ವೆಟ್ ಹಾಲ್ ನಲ್ಲಿ ನಡೆದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಗೃಹರಕ್ಷಕ ದಳ ಪೌರರಕ್ಷಣೆ ಹಾಗೂ ರಾಜ್ಯ ವಿಪತ್ತು ಸ್ವಂದನಾ ಪಡೆ ಅಧಿಕಾರಿ ಸಿಬ್ಬಂದಿಗಳಿಗೆ ಮುಖ್ಯಮಂತ್ರಿ ಚಿನ್ನದ ಪದಕ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಅಗ್ನಿಶಾಮಕ ಠಾಣೆಯ ಪಿ.ಕೃಷ್ಣ ನಾಯ್ಕ ಮತ್ತು ಎಂ.ಗೋಪಾಲರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

- Advertisement -

Latest News

error: Content is protected !!