- Advertisement -


- Advertisement -
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಮಲ್ಲಳ್ಳಿ ಫಾಲ್ಸ್‌ನಲ್ಲಿ ಅಪಾಯದ ಸ್ಥಿತಿಯಲ್ಲಿ ಸಿಲುಕಿದ್ದ ಕಾಲೇಜು ವಿದ್ಯಾರ್ಥಿಗಳನ್ನು ಸ್ಥಳೀಯರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸಿನಿಮೀಯ ರೀತಿಯ ಕಾರ್ಯಾಚರಣೆ ಮೂಲಕ ರಕ್ಷಿಸಿದ್ದಾರೆ.
ವಿದ್ಯಾರ್ಥಿಗಳು ಫಾಲ್ಸ್‌ನ ಮುಂಭಾಗದ ಬೇಲಿ ದಾಟಿ ಫಾಲ್ಸ್ ಮಧ್ಯಭಾಗಕ್ಕೆ ಅಕ್ರಮ ಪ್ರವೇಶ ಮಾಡಿದ್ದರು. ಧುಮ್ಮಿಕ್ಕುತ್ತಿದ್ದ ಫಾಲ್ಸ್‌ನ ಮಧ್ಯಭಾಗಕ್ಕೆ ತೆರಳಿ ಅಪಾಯದ ಸ್ಥಳದಲ್ಲಿ ತಗಲಾಕೊಂಡಿದ್ದರು. ಈ ವೇಳೆ ನೀರಿನ ರಭಸ ಹೆಚ್ಚಾಗಿ ವಾಪಾಸ್ ಬರಲಾಗದೆ ಪರದಾಡಿದ್ದರು ಮತ್ತು ಕಲ್ಲಿನ ಬಳಿ ಆಶ್ರಯ ಪಡೆದಿದ್ದರು.
ತಕ್ಷಣವೇ ಸ್ಥಳೀಯರು ಸೋಮವಾರಪೇಟೆ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ದೌಡಾಯಿಸಿದ ಸಿಬ್ಬಂದಿ ಸ್ಥಳೀಯರ ಸಹಕಾರದೊಂದಿಗೆ ಸಿನಿಮೀಯ ರೀತಿಯ ಕಾರ್ಯಾಚರಣೆ ನಡೆಸಿ ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ.
- Advertisement -


