Thursday, June 4, 2026
Homeಕರಾವಳಿಅರುಣ್ ಪುತ್ತಿಲ ಲೋಕಸಭೆ ಸ್ಪರ್ಧೆಯಿಂದ ಹಿಂದೆ ಸರಿಯುತ್ತಾರಾ..!!?; ಪುತ್ತಿಲ ಪರಿವಾರದ ವಕ್ತಾರ ಶ್ರೀಕೃಷ್ಣ ಉಪಾಧ್ಯಾಯ ಅಚ್ಚರಿಯ...

ಅರುಣ್ ಪುತ್ತಿಲ ಲೋಕಸಭೆ ಸ್ಪರ್ಧೆಯಿಂದ ಹಿಂದೆ ಸರಿಯುತ್ತಾರಾ..!!?; ಪುತ್ತಿಲ ಪರಿವಾರದ ವಕ್ತಾರ ಶ್ರೀಕೃಷ್ಣ ಉಪಾಧ್ಯಾಯ ಅಚ್ಚರಿಯ ಹೇಳಿಕೆ

- Advertisement -
- Advertisement -

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಟಿಕೆಟ್ ಹಂಚಿಕೆಯ ಬೆನ್ನಲೇ ಪುತ್ತಿಲ ಪರಿವಾರದ ವಕ್ತಾರ ಶ್ರೀಕೃಷ್ಣ ಉಪಾಧ್ಯಾಯ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ನನಗೆ ಕೇಂದ್ರದಲ್ಲಿ ಮೋದಿಯವರ ನಾಯಕತ್ವದ ಬಗ್ಗೆ ಬಹಳ ಅಭಿಮಾನವಿದೆ. ಸಾಮಾನ್ಯ ಮತದಾರನಾಗಿ ನಾನು ಯೋಚನೆ ಮಾಡುವುದು ಏನೆಂದರೇ ಮತದಾರನಾದವನು ಪಕ್ಷ ನಿಷ್ಟನಾಗಿ ಇರಲೇಬಾರದು, ಒಬ್ಬ ದೇಶ ಭಕ್ತ ಮತದಾರ ದೇಶಕ್ಕೆ ಒಳ್ಳೆಯ ನಾಯಕನನ್ನು ಆಯ್ಕೆ ಮಾಡಬೇಕು. ದ.ಕ. ಲೋಕಸಭಾ ಅಭ್ಯರ್ಥಿಯನ್ನಾಗಿ ಮಾಜಿ ಸೈನಿಕ, ಯಂಗ್‌ಸ್ಟಾರ್, ಒಬ್ಬ ಕ್ರಿಯಾಶೀಲ ವ್ಯಕ್ತಿತ್ವದ ಬ್ರಿಜೇಶ್ ಚೌಟರವರ ಆಯ್ಕೆ ಬಹಳ ಸಂತೋಷ ತಂದಿದೆ. ಪುತ್ತೂರಿನಲ್ಲಿರುವ ಕೆಲವೊಂದು ಗೊಂದಲಗಳನ್ನು ಬ್ರಿಜೇಶ್ ಚೌಟರವರು ಸರಿ ಮಾಡಬಹುದು ಎಂಬ ನಂಬಿಕೆ ಇದೆ ಎಂದು ತಿಳಿಸಿದರು.

ಇನ್ನು ಈ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಪುತ್ತಲ ಪರಿವಾರದ ಲೋಕಸಭಾ ಅಭ್ಯರ್ಥಿ ಅರುಣ್ ಪುತ್ತಿಲರವರು ಎಂದು ತಿಳಿಸಿದ್ದರು. ಆದರೆ ಇದೀಗ ಅರುಣ್ ಪುತ್ತಿಲ ಲೋಕಸಭೆ ಸ್ಪರ್ಧೆಯಿಂದ ಹಿಂದೆ ಸರಿಯುತ್ತಾರಾ..!!?? ಎನ್ನುವ ಅಚ್ಚರಿಯ ವಿಚಾರವನ್ನ ಕಾದುನೋಡಬೇಕಿದೆ. ಪುತ್ತಿಲ ಮತ್ತು ಬ್ರಿಜೇಶ್ ಚೌಟ ಸ್ಪಧಿಸಿದ್ದಲ್ಲಿ ಮತ್ತೆ ಕಾಂಗ್ರೆಸ್ಸಿಗೆ ಲಾಭವಾಗುತ್ತಾ? ಈ ಎಲ್ಲಾ ಸಂಶಯಗಳು ಉದ್ಭವಿಸಿದೆ ಎಂದು ಅವರು ಹೇಳಿದರು.

- Advertisement -

Latest News

error: Content is protected !!