Thursday, May 2, 2024
Homeಕರಾವಳಿಉಡುಪಿಉಡುಪಿ; ತನ್ನದೇ ಬಸ್ ನ ಅಡಿಗೆ ಬಿದ್ದು ಬಸ್ ನ ಮಾಲೀಕ ಸಾವು

ಉಡುಪಿ; ತನ್ನದೇ ಬಸ್ ನ ಅಡಿಗೆ ಬಿದ್ದು ಬಸ್ ನ ಮಾಲೀಕ ಸಾವು

spot_img
- Advertisement -
- Advertisement -

ಉಡುಪಿ; ಗ್ಯಾರೇಜ್ ನಲ್ಲಿ ತನ್ನದೇ ಬಸ್ ನ ಅಡಿಗೆ ಬಿದ್ದು ಬಸ್ ನ ಮಾಲೀಕ ಸಾವನ್ನಪ್ಪಿರುವ ಘಟನೆ ಉಡುಪಿಯ ಬಡಗಬೆಟ್ಟುವಿನಲ್ಲಿ ನಡೆದಿದೆ.ಮಾಂಡವಿ ಖಾಸಗಿ ಬಸ್‌ನ ಮಾಲೀಕ ದಯಾನಂದ ಶೆಟ್ಟಿ (65) ಮೃತ ದುರ್ದೈವಿ.

ದಯಾನಂದ್ ಅವರು  ತಮ್ಮ ಬಸ್‌ ಅನ್ನು ಗ್ಯಾರೇಜ್‌ನಲ್ಲಿ ರಿಪೇರಿಗೆ ನೀಡಿದ್ದನ್ನು ನೋಡಲು ಬಂದಿದ್ದರು. ಈ ವೇಳೆ ಬಸ್‌ನ ಎದುರು ನಿಂತಿದ್ದ ವೇಳೆ ಚಾಲಕ ಬಸ್‌ ಚಲಾಯಿಸಿದ ಪರಿಣಾಮ ಅವರು ಮುಂಭಾಗದ ಚಕ್ರಕ್ಕೆ ಸಿಲುಕಿ ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ

- Advertisement -
spot_img

Latest News

error: Content is protected !!