ನವದೆಹಲಿ : ಅಮೆರಿಕದ ಶ್ವೇತ ಭವನ ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ಕಚೇರಿಗಳನ್ನು ಟ್ವಿಟರ್ನಲ್ಲಿ ಫಾಲೋ ಮಾಡುತ್ತಿತ್ತು. ಆದರೆ ನಿನ್ನೆ ಅದು ಎಲ್ಲವನ್ನೂ ಅನ್ಫಾಲೋ ಮಾಡಿ ಸುದ್ದಿಯಾಗಿತ್ತು.
ಅನ್ಫಾಲೋ ಮಾಡಿದ್ದು ಯಾಕೆ ಎಂಬ ಪ್ರಶ್ನೆಗಳು ಹುಟ್ಟಿಕೊಂಡ ಬೆನ್ನಲ್ಲೇ ಅಮೆರಿಕ ಶ್ವೇತ ಭವನ ಅದಕ್ಕೀಗ ಸ್ಪಷ್ಟಿಕರನ ನೀಡಿದೆ .
ಸಾಮಾನ್ಯವಾಗಿ ಅಮೆರಿಕ ಅಧ್ಯಕ್ಷರು ವಿದೇಶಗಳಿಗೆ ಭೇಟಿ ಕೊಟ್ಟಾಗ ವೈಟ್ ಹೌಸ್ ಆಯಾ ಆತಿಥೇಯ ದೇಶದ ನಾಯಕರು, ಪ್ರಮುಖ ಕಚೇರಿಗಳನ್ನು ಟ್ವಿಟರ್ನಲ್ಲಿ ಫಾಲೋ ಮಾಡುತ್ತದೆ. ಆ ದೇಶಗಳ ನಾಯಕರು, ಕಚೇರಿಗಳು ಮಾಡುವ ಟ್ವೀಟ್ಗಳನ್ನು ರೀಟ್ವೀಟ್ ಮಾಡಿಕೊಳ್ಳುವ ಸಲುವಾಗಿ ವೈಟ್ ಹೌಸ್ ಈ ಕ್ರಮ ಅನುಸರಿಸುತ್ತದೆ. ಆದರೆ ಇದು ಸೀಮಿತ ಅವಧಿಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ವೈಟ್ ಹೌಸ್ ಹೇಳಿದೆ.
ಈ ಬಗ್ಗೆ ರಾಹುಲ್ ಗಾಂಧಿ ಸೇರಿದಂತೆ ಅನೇಕ ಭಾರತೀಯ ನಾಯಕರು ಅನುಮಾನ ವ್ಯಕ್ತ ಪಡಿಸಿದ್ದರು,
ಈ ಅನುಮಾನಕ್ಕೆ ಶ್ವೇತಭವನ ತೆರೆ ಎಳೆದಿದೆ. ಸಾಮಾನ್ಯವಾಗಿ ಶ್ವೇತಭವನ ಅಮೇರಿಕಾದ ಹಿರಿಯ ಅಧಿಕಾರಿಗಳ ಟ್ವಿಟರ್ ಅಕೌಂಟ್ನ್ನು ಫಾಲೋ ಮಾಡುತ್ತದೆ. ಹಾಗೇ ಬೇರೆ ದೇಶಗಳಿಗೆ ಅಧ್ಯಕ್ಷರು ಪ್ರವಾಸ ಮಾಡಿದ ಸಂದರ್ಭದಲ್ಲಿ ಸೀಮಿತ ಅವಧಿಗೆ ಆ ದೇಶಗಳ ಪ್ರಮುಖರನ್ನು ಫಾಲೋ ಮಾಡುತ್ತದೆ ಎಂದು ತಿಳಿಸಿದೆ
ಮೋದಿ ಟ್ವಿಟ್ಟರ್ ಖಾತೆ ಅನ್ ಫಾಲೋ ಮಾಡಿದ ಅಮೇರಿಕಾ : ಶ್ವೇತ ಭವನ ಸ್ಪಷ್ಟನೆ
- Advertisement -
- Advertisement -
- Advertisement -