Tuesday, December 3, 2024
Homeಇತರಔಷಧಿ ಸಿಕ್ಕ ಕೂಡಲೇ ಮೋದಿ ಟ್ವಿಟ್ಟರ್‌ ಖಾತೆ ಅನ್‌ ಫಾಲೋ ಮಾಡಿದ ಅಮೇರಿಕಾ

ಔಷಧಿ ಸಿಕ್ಕ ಕೂಡಲೇ ಮೋದಿ ಟ್ವಿಟ್ಟರ್‌ ಖಾತೆ ಅನ್‌ ಫಾಲೋ ಮಾಡಿದ ಅಮೇರಿಕಾ

spot_img
- Advertisement -
- Advertisement -

ನವದೆಹಲಿ : ಕೋವಿಡ್ 19 ರಂಪಾಟಕ್ಕೆ ಇಡೀ ವಿಶ್ವವೇ ತತ್ತರಿಸಿದೆ . ಕೊರೊನಾ ಸೋಂಕಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ರಾಮಬಾಣ ಎಂಬ ಮಾಹಿತಿ ಸಿಗ್ತಿದ್ದಂತೆ ಅಮೇರಿಕಾ, ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ನೀಡುವಂತೆ ಭಾರತಕ್ಕೆ ಬೇಡಿಕೆ ಇಟ್ಟಿತ್ತು . ಭಾರತ ಅಮೇರಿಕಾಕ್ಕೆ ಔಷಧಿ ಕಳುಹಿಸುತ್ತಿದ್ದಂತೆ ಶ್ವೇತ ಭವನ ಬಣ್ಣ ಬದಲಾಯಿಸಿದೆ .

ಔಷಧಿಗೆ ಬೇಡಿಕೆಯಿಟ್ಟಾಗ ವೈಟ್ ಹೌಸ್, ಪ್ರಧಾನಿ ಮೋದಿ ಸೇರಿದಂತೆ 6 ಟ್ವಿಟರ್ ಫಾಲೋ ಮಾಡಲು ಶುರು ಮಾಡಿತ್ತು. ಔಷಧಿ ಸಿಗ್ತಿದ್ದಂತೆ ಮೋದಿ ಸೇರಿ 6 ಟ್ವಿಟರ್ ಹ್ಯಾಂಡಲ್ ಗಳನ್ನು ಅನ್ ಫಾಲೋ ಮಾಡಿದೆ.

ಭಾರತದಲ್ಲಿ ತಯಾರಿಸಲಾಗುವ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ಕೊರೊನಾಕ್ಕೆ ಒಳ್ಳೆ ಮದ್ದು ಎನ್ನಲಾಗಿದೆ. ವಿಜ್ಞಾನಿಗಳು ಈ ಬಗ್ಗೆ ಮಾಹಿತಿ ನೀಡ್ತಿದ್ದಂತೆ ಇದಕ್ಕೆ ಬೇಡಿಕೆ ಹೆಚ್ಚಾಗಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಬಗ್ಗೆ ಮೋದಿ ಜೊತೆ ಮಾತನಾಡಿದ್ದರು. ಈ ಸಂದರ್ಭದಲ್ಲಿ ಶ್ವೇತ ಭವನ ಭಾರತದ 6 ಟ್ವಿಟರ್ ಹ್ಯಾಂಡಲ್ ಫಾಲೋ ಮಾಡಲು ಶುರು ಮಾಡಿತ್ತು. ಇದ್ರಲ್ಲಿ ಪ್ರಧಾನ ಮಂತ್ರಿ ಕಚೇರಿ, ರಾಷ್ಟ್ರಪತಿ ಭವನ, ಅಮೆರಿಕದ ಭಾರತೀಯ ರಾಯಭಾರ ಕಚೇರಿ ಮತ್ತು ಭಾರತದ ಅಮೆರಿಕದ ರಾಯಭಾರ ಕಚೇರಿ ಸೇರಿವೆ.

- Advertisement -
spot_img

Latest News

error: Content is protected !!