- Advertisement -
- Advertisement -
ಗುಜರಾತಿನ ಅಹಮದಾಬಾದ್ ನಲ್ಲಿ ವ್ಯಕ್ತಿಯೊಬ್ಬನ ವಿವಾಹೇತರ ಸಂಬಂಧ ಬಯಲಾಗಿದೆ. ಸದ್ಯ ಲಾಕ್ ಡೌನ್ ಜಾರಿಯಲ್ಲಿದೆ. ಜನರು ಪಾಸ್ ತೆಗೆದುಕೊಂಡು ಕಚೇರಿಗೆ ಹೋಗ್ತಿದ್ದಾರೆ. ಅಹಮದಾಬಾದ್ ವ್ಯಕ್ತಿ ಕೂಡ ಕಚೇರಿ ನೆಪ ಹೇಳಿ ಹೊರಗೆ ಹೋಗಿದ್ದಾನೆ.
ಇಬ್ಬರ ಮದುವೆಯಾಗಿ ಮೂರು ದಿನ ಕಳೆದಿತ್ತು ಎನ್ನಲಾಗಿದೆ. ಪತಿ ಕಚೇರಿ ನೆಪ ಹೇಳಿ ತನ್ನಿಂದ ದೂರವಿದ್ದ ಕಾರಣ ಪತ್ನಿ ಕ್ರೆಡಿಟ್ ಕಾರ್ಡ್ ಬಿಲ್ ಚೆಕ್ ಮಾಡಿದ್ದಾಳೆ. ಪತಿ ಕ್ರೆಡಿಟ್ ಕಾರ್ಡ್ ಬಿಲ್ ನೋಡಿ ಆಕೆ ದಂಗಾಗಿದ್ದಾಳೆ. ತಕ್ಷಣ ಸಹೋದರನಿಗೆ ಮಾಹಿತಿ ನೀಡಿದ್ದಾಳೆ.
ಸಹೋದರ ತನಿಖೆ ಶುರು ಮಾಡಿದ್ದಾನೆ. ಈ ವೇಳೆ ತನ್ನ ಭಾವ ಪ್ರೇಯಸಿ ಜೊತೆ ಹೊಟೇಲ್ ನಲ್ಲಿರುವುದು ಗೊತ್ತಾಗಿದೆ. ಕಚೇರಿ ನೆಪ ಹೇಳಿ ಹೊಟೇಲ್ ನಲ್ಲಿ ರೂಮ್ ಬುಕ್ ಮಾಡಿದ್ದ ವ್ಯಕ್ತಿಯ ಬಣ್ಣ ಬಯಲಾಗಿದೆ. ಪ್ರಕರಣ ಪೊಲೀಸ್ ಠಾಣೆಯಲ್ಲಿದ್ದು, ವಿಚಾರಣೆ ನಡೆಯುತ್ತಿದೆ.
- Advertisement -