ಲಾಕ್ ಡೌನ್ ಜಾರಿಯಲ್ಲಿರುವ ಸಂದರ್ಭದಲ್ಲಿ ಜನರಿಗೆ ಅನುಕೂಲವಾಗಲು ಸರ್ಕಾರ ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ಇಎಸ್‌ಐ ಯೋಜನೆಯನ್ನು ಪಡೆಯುವ ನೌಕರರಿಗೆ ಜೂನ್ 30 ರವರೆಗೆ ಎಲ್ಲಾ ವೈದ್ಯಕೀಯ ಸೇವೆಗಳನ್ನು ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಇಎಸ್‌ಐ ಈ ಯೋಜನೆ ಲಾಭವನ್ನು ತಿಂಗಳಿಗೆ 21 ಸಾವಿರಕ್ಕಿಂತ ಕಡಿಮೆ ಸಂಬಳ ಪಡೆಯುವ ಹಾಗೂ 10ಕ್ಕಿಂತ ಹೆಚ್ಚು ಜನರಿರುವ ಕಚೇರಿಯಲ್ಲಿ ಕೆಲಸ ಮಾಡುವ ಉದ್ಯೋಗಿ ಪಡೆಯುತ್ತಾನೆ. ಈ ಹಿಂದೆ ಇದ್ರ ಮಿತಿ 15 ಸಾವಿರವಿತ್ತು. ಅದನ್ನು 2017ರಲ್ಲಿ 21 ಸಾವಿರಕ್ಕೆ ಹೆಚ್ಚಿಸಲಾಗಿದೆ.
ಲಾಕ್‌ಡೌನ್ ಕಾರಣ ಕಂಪನಿಗಳು ಕಾರ್ಮಿಕರ ವಾರ್ಷಿಕ ಒಟ್ಟು ಮೊತ್ತವನ್ನು ಪಾವತಿಸದೆ ಹೋದರೂ ನೌಕರರ ವೈದ್ಯಕೀಯ ಸೌಲಭ್ಯಗಳನ್ನು ನಿಲ್ಲಿಸಲಾಗುವುದಿಲ್ಲ ಎಂದು ಇಎಸ್‌ಐಸಿ ಘೋಷಿಸಿದೆ.
ನೌಕರರು ತಮ್ಮ ವೈದ್ಯಕೀಯ ಕಾರ್ಡ್‌ಗಳನ್ನು ತೋರಿಸಿ ವೈದ್ಯಕೀಯ ಸೇವೆಗಳನ್ನು ಪಡೆಯಬಹುದು. ಕಾರ್ಡ್ ಅವಧಿ ಮೀರಿದ್ದರೂ ಚಿಂತಿಸಬೇಕಾಗಿಲ್ಲ. ಹಳೆಯ ಕಾರ್ಡ್ ತೋರಿಸಿ ಎಲ್ಲಾ ಸೇವೆಗಳನ್ನು ಪಡೆಯಬಹುದು.
ಖಾಸಗಿ ಔಷಧಿ ಮಳಿಗೆಗಳಲ್ಲೂ ಔಷಧಿಯನ್ನು ಖರೀದಿಸಬಹುದು. ಪ್ರತಿ ದಿನ ಔಷಧಿ ಸೇವಿಸುವವರಿಗೆ ಇದ್ರಿಂದ ಲಾಭವಾಗಲಿದೆ. ನೌಕರ ಔಷಧಿ ಖರೀದಿ ಮಾಡಿದ ನಂತ್ರ ಇಎಸ್‌ಐಸಿಯಿಂದ ಹಣ ಪಡೆಯಬಹುದು.
ಐಎಸ್‌ಐನಲ್ಲಿ ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರೆ ಉಳಿದ ರೋಗಿಗಳು ಚಿಂತಿಸಬೇಕಾಗಿಲ್ಲ. ರೋಗಿಗಳು ಇಎಸ್ ಐ ಒಪ್ಪಂದ ಮಾಡಿಕೊಂಡಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು.