Saturday, June 6, 2026
Homeಕರಾವಳಿಉಡುಪಿಉಡುಪಿ: ದೇವಸ್ಥಾನದಿಂದ ವಾಪಾಸಾಗ್ತಿದ್ದ ವೇಳೆ ಮಹಿಳೆಯ ಚಿನ್ನದ ಸರ ಕಸಿದು ಪರಾರಿ

ಉಡುಪಿ: ದೇವಸ್ಥಾನದಿಂದ ವಾಪಾಸಾಗ್ತಿದ್ದ ವೇಳೆ ಮಹಿಳೆಯ ಚಿನ್ನದ ಸರ ಕಸಿದು ಪರಾರಿ

- Advertisement -
- Advertisement -

ಉಡುಪಿ: ಕಡಿಯಾಳಿ ದೇವಸ್ಥಾನದಿಂದ ವಾಪಾಸ್ಸು ಬರ್ತಿದ್ದ ವೇಳೆ ಮಹಿಳೆಯ ಚಿನ್ನದ ಸರವನ್ನು ವ್ಯಕ್ತಿಯೊಬ್ಬ ಎಗರಿಸಿದ ಘಟನೆ ಎಂಜಿಎಂ ಕಾಲೇಜು ಮೈದಾನದ ಸಮೀಪ ನಡೆದಿದೆ.

ಹಿಂದಿನಿಂದ ಬಂದ ವ್ಯಕ್ತಿ ಮಹಿಳೆ ಧರಿಸಿದ್ದ 2.30 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ಸುಲಿಗೆ ಮಾಡಿದ್ದಾನೆ. ಕುಂಜಿಬೆಟ್ಟು ನಿವಾಸಿ ಪ್ರೇಮಾ ಶೇಣವ ಸರ ಕಳೆದುಕೊಂಡವರು. ಘಟನೆ ಬಗ್ಗೆ ಪ್ರೇಮಾ ಶೇಣವ ಅವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!