Saturday, June 6, 2026
Homeಕರಾವಳಿಸುಳ್ಯದ ಎಲಿಮಲೆಯಲ್ಲಿ ಭೀಕರ ಅಪಘಾತ; ಅಣ್ಣ ತಂಗಿ ಇಬ್ಬರೂ ಸಾವು

ಸುಳ್ಯದ ಎಲಿಮಲೆಯಲ್ಲಿ ಭೀಕರ ಅಪಘಾತ; ಅಣ್ಣ ತಂಗಿ ಇಬ್ಬರೂ ಸಾವು

- Advertisement -
- Advertisement -

ಸುಳ್ಯ; ಎಲಿಮಲೆ ಹಾಗೂ ಜಬಳೆ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಅಣ್ಣ ತಂಗಿ ಇಬ್ಬರೂ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ಕಡಪಾಲ ದೇವಿಪ್ರಸಾದ್ ಅವರ ಪುತ್ರ ನಿಶಾಂತ್ ಚಲಾಯಿಸುತ್ತಿದ್ದ ಸ್ಕೂಟಿ ಮತ್ತು ಸುಳ್ಯ ಕಡೆಯಿಂದ ಬಂದ ಮಾರುತಿ ಕಾರು ನಡುವೆ ಅಪಘಾತ ಸಂಭವಿಸಿದೆ. ನಿಶಾಂತ್ ತಂಗಿಯನ್ನು ಕರೆದುಕೊಂಡು ಎಲಿಮಲೆಯಿಂದ ಮನೆಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಅಪಘಾತದಿಂದಾಗಿ ನಿಶಾಂತ್ ಹಾಗೂ ತಂಗಿ ಮೋಕ್ಷಾ ಗಂಭೀರ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳೀಯರು ಅವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.ಅಷ್ಟರಲ್ಲಿ ನಿಶಾಂತ್ ಸಾವನ್ನಪ್ಪಿದ್ದಾರೆ.

ಇನ್ನು ಮೋಕ್ಷಾಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದಾಗ ದಾರಿ ಮಧ್ಯೆ ಆಕೆಯೂ ಸಾವನ್ನಪ್ಪಿದ್ದಾಳೆ. ನಿಶಾಂತ್ ಸುಳ್ಯ ಜ್ಯೂನಿಯರ್ ಕಾಲೇಜಿನ ಪಿಯುಸಿ ವಿದ್ಯಾರ್ಥಿಯಾಗಿದ್ದು, ಮೋಕ್ಷಾ ದೇವಚಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ. ಎರಡು ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

- Advertisement -

Latest News

error: Content is protected !!