Wednesday, April 16, 2025
Homeಕರಾವಳಿಉಡುಪಿಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗೆಲಲ್ಲ ನಕ್ಸಲರಿಗೆ, ಉಗ್ರರಿಗೆ ಸುಗ್ಗಿ; ಸರ್ಕಾರದ ಚಿಂತನೆಯ ಬಗ್ಗೆ ಸುನೀಲ್ ಕುಮಾರ್ ತೀವ್ರ ಆಕ್ಷೇಪ 

ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗೆಲಲ್ಲ ನಕ್ಸಲರಿಗೆ, ಉಗ್ರರಿಗೆ ಸುಗ್ಗಿ; ಸರ್ಕಾರದ ಚಿಂತನೆಯ ಬಗ್ಗೆ ಸುನೀಲ್ ಕುಮಾರ್ ತೀವ್ರ ಆಕ್ಷೇಪ 

spot_img
- Advertisement -
- Advertisement -

ಉಡುಪಿ: ಶಾಸಕ ಸುನಿಲ್ ಕುಮಾರ್ ಅವರು ಎಕ್ಸ್ ಪೋಸ್ಟ್ ಮಾಡಿ ಚಿಕ್ಕಮಗಳೂರಿನಲ್ಲಿ ಬುಧವಾರ(ಜ8) ಆರು ಮಂದಿ ನಕ್ಸಲರು ಶರಣಾಗುವ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.

“ರಾಜ್ಯ ಸರ್ಕಾರವು ಆರು ಮಂದಿ ನಕ್ಸಲರಿಗೆ ಶರಣಾಗತಿ ಪ್ಯಾಕೇಜ್ ನೀಡುತ್ತಿರುವುದು ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ. ಸರ್ಕಾರವು ಯಾವ ಮಾನದಂಡದ ಮೇಲೆ ಈ ಕ್ರಮಕ್ಕೆ ಮುಂದಾಗಿದೆ?ಎಂಬುದನ್ನು ಸ್ಪಷ್ಟಪಡಿಸಬೇಕು. ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದಾಗೆಲಲ್ಲ ನಕ್ಸಲರಿಗೆ – ಉಗ್ರರಿಗೆ ಸುಗ್ಗಿ. ಅವರಿಗೆ ಕ್ಷಮೆ, ಪ್ರಕರಣ ರದ್ದು, ಸುಖ-ಸೌಕರ್ಯ ಎಲ್ಲವೂ ಸುಲಭದಲ್ಲಿ ಸಿಗುತ್ತದೆ. ರಾಷ್ಟ್ರಕವಿ ಕುವೆಂಪು ಅವರ ಕರ್ಮಭೂಮಿ ಆಗಿದ್ದ ತಣ್ಣಗಿನ ಮಲೆನಾಡಲ್ಲಿ ಬಂದೂಕಿನ ಮೊರೆತ ಕೇಳಿಸಿದ ನಕ್ಸಲರಿಗೆ ಕ್ಷಮೆ ಕೊಟ್ಟು, ಅವರನ್ನು ನಗರ ನಕ್ಸಲರಾಗಿಸಿ ಬುಡಮೇಲು ಕೃತ್ಯಕ್ಕೆ ಲೈಸೆನ್ಸ್ ಕೊಡುತ್ತೀರಾ ಸಿದ್ದರಾಮಯ್ಯ ನವರೇ? ಇದರಿಂದ ಪೊಲೀಸರ ಆತ್ಮ ಸ್ಥೈರ್ಯ ಏನಾಗಬೇಡ? ಈ ಶರಣಾಗತಿ ಪ್ರಹಸನವೇ ಅನುಮಾನಾಸ್ಪದವಾಗಿದೆ” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -
spot_img

Latest News

error: Content is protected !!