Wednesday, June 24, 2026
Homeಅಪರಾಧನಕ್ಸಲರನ್ನು ಬೆಂಗಳೂರಿನ ಆಹ್ವಾನಿಸಿದ ಸಿಎಂ; ಚಿಕ್ಕಮಗಳೂರು ಬದಲಿಗೆ ಬೆಂಗಳೂರಿನಲ್ಲಿ ಶರಣಾಗಲಿರುವ ನಕ್ಸಲರು 

ನಕ್ಸಲರನ್ನು ಬೆಂಗಳೂರಿನ ಆಹ್ವಾನಿಸಿದ ಸಿಎಂ; ಚಿಕ್ಕಮಗಳೂರು ಬದಲಿಗೆ ಬೆಂಗಳೂರಿನಲ್ಲಿ ಶರಣಾಗಲಿರುವ ನಕ್ಸಲರು 

- Advertisement -
- Advertisement -

ಚಿಕ್ಕಮಗಳೂರು: ಇಲ್ಲಿನ ಜಿಲ್ಲಾಡಳಿತದ ಮುಂದೆ ಶರಣಾಗಬೇಕಿದ್ದ ನಕ್ಸಲರು ಇದೀಗ ತಮ್ಮ ಶರಣಾಗತಿಯಲ್ಲಿ ಬದಲಾವಣೆಯನ್ನ ಮಾಡಿಕೊಂಡಿದ್ದಾರೆ. ಶರಣಾಗಬೇಕಿದ್ದ ಆರು ಜನ ನಕ್ಸಲರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಶರಣಾಗತಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ. 

ಜಿಲ್ಲಾಡಳಿತವು ಚಿಕ್ಕಮಗಳೂರಿನಲ್ಲಿ ನಕ್ಸಲರ ಶರಣಾಗತಿಗೆ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದ್ದು, ಆದರೆ ಮುಖ್ಯಮಂತ್ರಿಗಳ ಆಹ್ವಾನದ ಮೇರೆಗೆ ಬೆಂಗಳೂರಿನಲ್ಲಿ ಶರಣಾಗಲಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಚಿಕ್ಕಮಗಳೂರು ಜಿಲ್ಲಾಡಳಿದ ಮುಂದೆ ಆರು ಜನ ನಕ್ಸಲರ ಪೋಷಕರು ತಮ್ಮವರನ್ನು ನೋಡಲು ಕಾತುರದಿಂದ ಎದುರು ನೋಡುತ್ತಿದ್ದು, ಇದೀಗ ಪೋಷಕರನ್ನು ಕೂಡ ವಾಹನದ ವ್ಯವಸ್ಥೆಯನ್ನು ಕಲ್ಪಿಸಿ ಬೆಂಗಳೂರಿಗೆ ಕಳಿಸಲಾಗುತ್ತಿದೆ. ಇನ್ನು ಸುದ್ದಿವಾಹಿನಿಗಳಿಗೆ ಸಿಕ್ಕ ಮಾಹಿತಿಯಂತೆ ನರಸಿಂಹರಾಜಪುರವರೆಗೂ ಆಗಮಿಸಿದ ನಕ್ಸಲರು ನಂತರ ಸಿ.ಎಂ ಆದೇಶದ ಮೇರೆಗೆ ಮಾರ್ಗ ಬದಲಾಯಿಸಿ, ಬೆಂಗಳೂರಿನಲ್ಲಿ ಸಿ.ಎಂ.ಸಮ್ಮುಖದಲ್ಲಿ ಇಂದು (ಜ.8) ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ಶರಣಾಗಲಿದ್ದಾರೆ.

ನಾಗರಿಕ ವೇದಿಕೆ ಮುಖಂಡ ಕೆ.ಎಲ್.ಅಶೋಕ್ ಬೆಂಗಳೂರಿಗೆ ತೆರಳುವ ವಿಚಾರವನ್ನು ಶಾಂತಿಗಾಗಿ ಎಂದು ಘೋಷಿಸಿದ್ದಾರೆ ಎಂದು ತಿಳಿದು ಬಂದಿದೆ. 

- Advertisement -

Latest News

error: Content is protected !!