Wednesday, June 24, 2026
Homeಕರಾವಳಿವೆನ್ಲಾಕ್‌ ಆಸ್ಪತ್ರೆಗೆ  ಹೊಸ ಒಪಿಡಿ ಬ್ಲಾಕ್‌ ತುರ್ತು ಅಗತ್ಯ:  ದಿನೇಶ್‌ ಗುಂಡೂರಾವ್‌

ವೆನ್ಲಾಕ್‌ ಆಸ್ಪತ್ರೆಗೆ  ಹೊಸ ಒಪಿಡಿ ಬ್ಲಾಕ್‌ ತುರ್ತು ಅಗತ್ಯ:  ದಿನೇಶ್‌ ಗುಂಡೂರಾವ್‌

- Advertisement -
- Advertisement -

ಮಂಗಳೂರು: ವೆನ್ಲಾಕ್‌ ಆಸ್ಪತ್ರೆಗೆ ಹೊಸ ಒಪಿಡಿ ಬ್ಲಾಕ್ ನ ಅಗತ್ಯವಿದೆ. ಈಗ ಇರುವಂತಹ ಹೊರರೋಗಿ ಘಟಕ ಕಟ್ಟಡವು ತೀರಾ ಹಳೆಯದಾಗಿರುವುದರಿಂದ ಹೊಸ ಒಪಿಡಿ ಬ್ಲಾಕ್‌ ನಿರ್ಮಿಸಬೇಕಿದೆ. ಈ ನಿಟ್ಟಿನಲ್ಲಿ ಸದ್ಯ ಮಂಜೂರಾಗಿರುವ ‘ಕ್ರಿಟಿಕಲ್‌ ಕೇರ್‌ ಬ್ಲಾಕ್‌’ ನಿರ್ಮಿಸುವ ಮೊತ್ತವನ್ನೇ ಹೊಂದಾಣಿಕೆ ಮಾಡಿಕೊಂಡು ಅದನ್ನು ನಿರ್ಮಿಸುವುದು ಸೂಕ್ತವೆಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ವೆನ್ಲಾಕ್‌ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯಲ್ಲಿ ಮಾತನಾಡಿದ ಅವರು, ‘ಆಸ್ಪತ್ರೆಯ ಆವರಣದಲ್ಲಿ 50 ಬೆಡ್‌ನ‌ ಕ್ರಿಟಿಕಲ್‌ ಕೇರ್‌ ಬ್ಲಾಕ್‌ಗೆ 24 ಕೋಟಿ ರೂ. ಮೀಸಲಿರಿಸಲಾಗಿದೆ. ಅದೇ ಮೊತ್ತವನ್ನು ಬಳಸಿಕೊಂಡು ಒಪಿಡಿ ಬ್ಲಾಕ್‌ ನಿರ್ಮಿಸುವ ಬಗ್ಗೆ ಯೋಜನೆ ರೂಪಿಸಿ, ಆ.28ಕ್ಕೆ ತನಗೆ ವರದಿ ಸಲ್ಲಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು. ಹಾಗೆಯೇ ಹಲವು ಜಿಲ್ಲೆಗಳಿಗೆ ಸೇವೆ ಸಲ್ಲಿಸುವ 900ಕ್ಕೂ ಹೆಚ್ಚು ಹಾಸಿಗೆಯ ದೊಡ್ಡ ಆಸ್ಪತ್ರೆಯಾಗಿರುವ ವೆನ್ಲಾಕ್‌ ಗೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡುವುದಕ್ಕೆ ಸಾರ್ವಜನಿಕ ಸಂಪರ್ಕಾಧಿ ಕಾರಿ(ಪಿಆರ್‌ಒ)ಗಳ ಅಗತ್ಯವಿದೆ. ಅದನ್ನು ಹೆಲ್ಪ್ ಡೆಸ್ಕ್ ಗೆ ನಿರ್ವಹಿಸುವುದು ಅಸಾಧ್ಯ. ಹಾಗಾಗಿ ಕನಿಷ್ಠ 2 ಪಿಆರ್‌ಒಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಿಸುವ ಬಗ್ಗೆ ಪ್ರಸ್ತಾವನೆ ಕಳುಹಿಸುವಂತೆ ಸಚಿವರು ವೆನ್ಲಾಕ್‌ ಆಸ್ಪತ್ರೆಯ ಜಿಲ್ಲಾ ವೈದ್ಯಕೀಯ ಅಧೀಕ್ಷಕಿ ಡಾ| ಜೆಸಿಂತಾ ಡಿ’ಸೋಜಾರಿಗೆ,’ ಸಚಿವರು ಸೂಚಿಸಿದರು.

- Advertisement -

Latest News

error: Content is protected !!