- Advertisement -
![]()
- Advertisement -
ವಿಟ್ಲ: ಉರಿಮಜಲು ಜಂಕ್ಷನ್‌ನಲ್ಲಿ ಆರೋಪಿಯೊಬ್ಬ ಸಾರ್ವಜನಿಕವಾಗಿಯೇ ವ್ಯಕ್ತಿಗೆ ಚೂರಿ ಇರಿದ ಘಟನೆ ಆ.18 ಭಾನುವಾರದಂದು ಸಂಭವಿಸಿದೆ.
ಕಾರ್ಯಾಡಿ ನಿವಾಸಿ ಆಪೀ ಎಂಬವರು ಚೂರಿ ಇರಿತಕ್ಕೊಳಗಾದ ವ್ಯಕ್ತಿ. ಆರೋಪಿ ಎಂಎಂಎಸ್ ಆಟೋ ಚಾಲಕ ಶರೀಫ್.
ಗಾಂಜಾ ವ್ಯಸನಿಗಳ ಕಾಟವು ಉರಿಮಜಲು ಮತ್ತು ಕಾರ್ಯಾಡಿ ಎಂಬಲ್ಲಿ ಹೆಚ್ಚಾಗುತ್ತಿದೆ. ಗಾಂಜಾ ಸೇವನೆಯೇ ಇಂತಹ ಅಪರಾಧಿ ಚಟುವಟಿಕೆಗಳು ಹೆಚ್ಚಲು ಕಾರಣವಾಗಿದ್ದು, ಪೊಲೀಸ್ ಇಲಾಖೆಯು ಇದನ್ನು ಗಂಭೀರವಾಗಿ ಪರಿಗಣಿಸಿ ಗಾಂಜಾ ವ್ಯಸನಿಗಳನ್ನು ಮಟ್ಟ ಹಾಕಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇನ್ನು ಗಂಭೀರ ಗಾಯಗೊಂಡ ಶರೀಫ್‌ನನ್ನು ಸ್ಥಳಿಯರು ಪುತ್ತೂರು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ.
- Advertisement -


