Thursday, April 25, 2024
Homeಮನರಂಜನೆವೀಕೆಂಡ್ ವಿತ್ ರಮೇಶ್ ಸೀಸನ್ 5 ರಲ್ಲಿ ಮೊದಲ ಅತಿಥಿ ಯಾರು ಗೊತ್ತಾ?

ವೀಕೆಂಡ್ ವಿತ್ ರಮೇಶ್ ಸೀಸನ್ 5 ರಲ್ಲಿ ಮೊದಲ ಅತಿಥಿ ಯಾರು ಗೊತ್ತಾ?

spot_img
- Advertisement -
- Advertisement -

ಬೆಂಗಳೂರು; ವೀಕೆಂಡ್ ವಿತ್ ರಮೇಶ್ ಸೀಸನ್ 5  ಮಾರ್ಚ್ 25 ರಂದು ಆರಂಭವಾಗಲಿದೆ. ಇದರಲ್ಲಿ ಮೊದಲ ಎಪಿಸೋಡ್ ನ ಗೆಸ್ಟ್ ಯಾರು ಅನ್ನೋದನ್ನು ಕಾರ್ಯಕ್ರಮದ ನಿರೂಪಕ ನಟ ರಮೇಶ್ ಅರವಿಂದ್ ರಿವೀಲ್ ಮಾಡಿದ್ದಾರೆ.

ಮೊದಲ ಎಪಿಸೋಡ್ ನಲ್ಲಿ ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾ ಕಾಣಿಸಿಕೊಳ್ಳಲಿದ್ದಾರೆ. ಅವರ ಭಾಗದ ಚಿತ್ರೀಕರಣ ಇಂದು ಆರಂಭವಾಗಲಿದೆ ಎಂದು ರಾಘವೇಂದ್ರ ಹುಣಸೂರು ಮಾಹಿತಿ ನೀಡಿದರು. ಎರಡನೇ ಎಪಿಸೋಡ್ ನಲ್ಲಿ ಕನ್ನಡ ಸೇರಿದಂತೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ, ಅದ್ಭುತ ನೃತ್ಯಗಾರ ಪ್ರಭುದೇವ ಸಾಧಕರ ಕುರ್ಚಿಯ ಮೇಲೆ ಕೂರಲಿದ್ದಾರೆ.

ಈ ಸೀಸನ್​ನಲ್ಲಿ ನಟ ಧ್ರುವ ಸರ್ಜಾ, ನಟಿ ರಚಿತಾ ರಾಮ್, ನಟಿ ಮಾಲಾಶ್ರೀ, ಇಶಾ ಫೌಂಡೇಶನ್​ನ ಜಗ್ಗಿ ವಾಸುದೇವ್ , ಖ್ಯಾತ ಹೃದ್ರೋಗ ತಜ್ಞ ಮಂಜುನಾಥ್ ಸೇರಿದಂತೆ ಇನ್ನೂ ಹಲವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಲ್ಲದೇ ಖ್ಯಾತನಾಮರೊಬ್ಬರು ಸಾಧಕರ ಸೀಟಿನಲ್ಲಿ ಕಾಣಿಸಿಕೊಳ್ಳಲಿದ್ದು ಅವರ ಹಸರು ಇನ್ನು ರಿವೀಲ್ ಆಗಿಲ್ಲ.

- Advertisement -
spot_img

Latest News

error: Content is protected !!