Thursday, June 4, 2026
Homeತಾಜಾ ಸುದ್ದಿNDA ಕೂಟದಲ್ಲೇ ನಾವು ಇರುತ್ತೇವೆ; ಇಂದಿನ ಸಭೆಗೂ ಹೋಗುತ್ತೇವೆ: ಚಂದ್ರಬಾಬು ನಾಯ್ಡು

NDA ಕೂಟದಲ್ಲೇ ನಾವು ಇರುತ್ತೇವೆ; ಇಂದಿನ ಸಭೆಗೂ ಹೋಗುತ್ತೇವೆ: ಚಂದ್ರಬಾಬು ನಾಯ್ಡು

- Advertisement -
- Advertisement -

ಅಮರಾವತಿ: ‘ನಾವು ಎನ್‌ಡಿಎ ಕೂಟದಲ್ಲೇ ಇರುತ್ತೇವೆ. ಜೊತೆಗೆ ದೆಹಲಿಯಲ್ಲಿ ಇಂದು ನಡೆಯಲಿರುವ ಸಭೆಗೂ ನಾನು ಹೋಗುತ್ತೇನೆ’ ಎಂದು ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ ಎನ್‌. ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಯಾವಾಗಲೂ ಮಾಧ್ಯಮದವರಿಗೆ  ಸುದ್ದಿ ಬೇಕಾಗುತ್ತದೆ. ನಾನು ಸುದೀರ್ಘ ರಾಜಕೀಯ ಅನುಭವ ಹೊಂದಿದ್ದೇನೆ. ಜತೆಗೆ, ದೇಶದಲ್ಲಿ ಹಲವು ರಾಜಕೀಯ ಬದಲಾವಣೆಗಳನ್ನು ನೋಡಿದ್ದೇನೆ. ಸದ್ಯ ನಾವು ಎನ್‌ಡಿಎ ಕೂಟದಲ್ಲಿದ್ದೇವೆ. ನಾನು ಇಂದಿನ ಸಭೆಯಲ್ಲಿ ಹಾಜರಾಗುತ್ತೇನೆ’ ಎಂದಿದ್ದಾರೆ. 

ಇನ್ನು ಲೋಕಸಭೆಯ ಮಹಾ ಸಮರದಲ್ಲಿ ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಹಾಗೂ ಜೆಡಿಯು ನಾಯಕ ನಿತೀಶ್‌ ಕುಮಾರ್‌ ಅವರು ಕಿಂಗ್‌ ಮೇಕರ್‌ಗಳಾಗಿ ಹೊರಹೊಮ್ಮಿದ್ದಾರೆ.

- Advertisement -

Latest News

error: Content is protected !!