Thursday, June 4, 2026
Homeತಾಜಾ ಸುದ್ದಿಬೆಂಗಳೂರಿಗೆ ಇನ್ನೊಂದು ಏರ್‌ಪೋರ್ಟ್‌ ತರಲು ಯತ್ನಿಸುವೆ; ತೇಜಸ್ವಿ ಸೂರ್ಯ

ಬೆಂಗಳೂರಿಗೆ ಇನ್ನೊಂದು ಏರ್‌ಪೋರ್ಟ್‌ ತರಲು ಯತ್ನಿಸುವೆ; ತೇಜಸ್ವಿ ಸೂರ್ಯ

- Advertisement -
- Advertisement -

ಬೆಂಗಳೂರು: ಬೆಂಗಳೂರಿಗೆ ಮತ್ತೂಂದು ವಿಮಾನ ನಿಲ್ದಾಣದ ಬೇಡಿಕೆಯಿದ್ದು ಅದರ ಕಾರ್ಯಗತಕ್ಕೆ ಶ್ರಮಿಸುತ್ತನೇ. ಕಳೆದ ಬಾರಿ ಏನು ಕೆಲಸ ಮಾಡಿದ್ದೇನೋ ಅದಕ್ಕಿಂತಲೂ 10 ಪಟ್ಟು ಪರಿಶ್ರಮ ಹಾಕಿ ಕ್ಷೇತ್ರ ಅಭಿವೃದ್ಧಿ ಮಾಡುತ್ತೇನೆ ಎಂದು ಸತತ 2ನೇ ಬಾರಿ ಸಂಸತ್‌ ಪ್ರವೇಶ ಮಾಡಿರುವ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿಸೂರ್ಯ ಹೇಳಿದ್ದಾರೆ.

ದೊಡ್ಡ ಸಂಖ್ಯೆಯಲ್ಲಿ ಗೆಲವು ಸಂತಸ ತಂದಿದ್ದು, ಹಣಬಲದ ಮುಂದೆ ಜನಬಲ ಗೆದ್ದಿದೆ. ಕೋವಿಡ್‌ ಸಂಕಷ್ಟದ ವೇಳೆ ಮಾಡಿದ್ದ ಕೆಲಸಗಳು ಕೈ ಹಿಡಿದಿವೆ. 2 ಸಾವಿರ ಬಡಜನರಿಗೆ ಮನೆ ಕಟ್ಟಿಕೊಟ್ಟಿರುವುದು, 10 ಸಾವಿರ ಶಾಲಾ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿರುವುದು. ಎಲ್ಲಕ್ಕಿಂತಲೂ ಮಿಗಿಲಾಗಿ ದೇಶದಲ್ಲೇ ಹೆಚ್ಚಿನ ಜನೌಷಧ ಕೇಂದ್ರಗಳನ್ನು ತೆರೆದು ಜನಸೇವೆ ಮಾಡಿರುವುದು ಜನರ ನನ್ನ ಮೇಲೆ ನಂಬಿಕೆಯಿರಿಸಿದ್ದಾರೆ ಎಂಬುವುದು ಇದರಿಂದ ಗೊತ್ತಾಗುತ್ತದೆ.

- Advertisement -

Latest News

error: Content is protected !!