Thursday, June 4, 2026
Homeತಾಜಾ ಸುದ್ದಿಆರೆಸ್ಸೆಸ್‌ ಕಚೇರಿಯಲ್ಲೂ ರಾಷ್ಟ್ರಧ್ವಜ ಹಾರಿಸುತ್ತೇವೆ: ರಾಷ್ಟ್ರಧ್ವಜದ ಬಗ್ಗೆ ಗೌರವ ಕಲಿಸಿಕೊಟ್ಟಿದ್ದೇ ಆರೆಸ್ಸೆಸ್‌: ಸಚಿವ ಸುನಿಲ್‌ ಕುಮಾರ್‌

ಆರೆಸ್ಸೆಸ್‌ ಕಚೇರಿಯಲ್ಲೂ ರಾಷ್ಟ್ರಧ್ವಜ ಹಾರಿಸುತ್ತೇವೆ: ರಾಷ್ಟ್ರಧ್ವಜದ ಬಗ್ಗೆ ಗೌರವ ಕಲಿಸಿಕೊಟ್ಟಿದ್ದೇ ಆರೆಸ್ಸೆಸ್‌: ಸಚಿವ ಸುನಿಲ್‌ ಕುಮಾರ್‌

- Advertisement -
- Advertisement -

ಯಾದಗಿರಿ: ಆರೆಸ್ಸೆಸ್‌ ಕಾರ್ಯಾಲಯದಲ್ಲೂ ರಾಷ್ಟ್ರಧ್ವಜ ಹಾರಿಸುತ್ತೇವೆ ಎಂದು ಸಚಿವ ವಿ. ಸುನಿಲ್‌ ಕುಮಾರ್‌ ಹೇಳಿದರು.

ಯಾದಗಿರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮಗೆ ರಾಷ್ಟ್ರೀಯತೆ ಹಾಗೂ ರಾಷ್ಟ್ರಧ್ವಜ ಬಗ್ಗೆ ಗೌರವ ಕಲಿಸಿಕೊಟ್ಟಿದ್ದೇ ಆರೆಸ್ಸೆಸ್‌. 

ರಾಷ್ಟ್ರೀಯತೆಯನ್ನು ಅತ್ಯಂತ ಉತ್ತುಂಗ ಶಿಖರಕ್ಕೇರಿಸಲು ಕಲಿಸಿದ್ದೇ ಸಂಘ. ಭಗವಾಧ್ವಜ ಮೇಲೆ ಕೆಲಸ ಮಾಡುತ್ತಿದೆ. ರಾಷ್ಟ್ರಧ್ವಜದ ಬಗ್ಗೆ ಅಪಪ್ರಚಾರ ಮಾಡಲು ಕೆಲವರು ಯತ್ನಿಸುತ್ತಿದ್ದಾರೆ. ರಾಷ್ಟ್ರಧ್ವಜಕ್ಕೆ ಅದರದ್ದೇ ಆದ ನೀತಿ ಸಂಹಿತೆಗಳಿವೆ. ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ರಾತ್ರಿವೇಳೆಯೂ ಹಾರಿಸುವ ಬಗ್ಗೆ ಸಂಹಿತೆಯಲ್ಲಿ ತಿದ್ದುಪಡಿ ತರಲಾಗಿದೆ. ಇಲ್ಲಿವರೆಗೆ ರಾತ್ರಿ ಧ್ವಜಾರೋಹಣ ಮಾಡುತ್ತಿರಲಿಲ್ಲ ಎಂದು ಘರ್‌ ಘರ್‌ ತಿರಂಗಾ ಅಭಿಯಾನ ಸಮರ್ಥಿಸಿಕೊಂಡರು.

- Advertisement -

Latest News

error: Content is protected !!